ರಷ್ಯಾ ಮೇಲೆ ಉಗ್ರರ ಭೀಕರ ದಾಳಿ : 60ಕ್ಕೂ ಹೆಚ್ಚು ಸಾವು

ಮಾಸ್ಕೊ : ರಷ್ಯಾದ ರಾಜಧಾನಿ ಮಾಸ್ಕೊದಲ್ಲಿ ರಾಕ್‌ಬ್ಯಾಂಡ್‌ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಹಾಲ್ ಮೇಲೆ ಶುಕ್ರವಾರ ರಾತ್ರಿ ಉಗ್ರರು ನುಗ್ಗಿ ದಾಳಿ ನಡೆಸಿ 60ಕ್ಕೂ ಹೆಚ್ಚು ಮಂದಿಯನ್ನು ಕೊಂದು ಹಾಕಿದ್ದಾರೆ. 150ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ರಷ್ಯಾ ಅಧ್ಯಕ್ಷರಾಗಿ ವ್ಲಾದಿಮೀರ್‌ ಪುಟಿನ್ ಭರ್ಜರಿ ಬಹುಮತದಿಂದ ಮರು ಆಯ್ಕೆಯಾದ ಬೆನ್ನಲ್ಲೇ ಈ ದಾಳಿ ನಡೆದಿದೆ. ಕಳೆದ ಎರಡು ದಶಕಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಇದೊಂದು ಬೃಹತ್ ಅನಾಹುತ ಎಂದು ಮಾಸ್ಕೊ ಮೇಯರ್ ಸೆರ್ಗೆಯ್ ಸೋಬಯಾನಿನ್ ಹೇಳಿದ್ದಾರೆ.
ಉಗ್ರರು ಮೊದಲು ಸ್ಫೋಟಕಗಳನ್ನು ಎಸೆದು ಗೊಂದಲ ಉಂಟುಮಾಡಿ ಅನಂತರ ಯದ್ವಾತದ್ವಾ ಗುಂಡು ಹಾರಿಸಿದ್ದಾರೆ. 6,000 ಕ್ಕೂ ಹೆಚ್ಚು ಜನರಿಗೆ ಅವಕಾಶ ಕಲ್ಪಿಸಬಹುದಾದ ಸಭಾಂಗಣದಲ್ಲಿ ರಷ್ಯಾದ ಪ್ರಸಿದ್ಧ ರಾಕ್ ಬ್ಯಾಂಡ್ ಪಿಕ್ನಿಕ್ ಸಂಗೀತ ಕಾರ್ಯಕ್ರಮಕ್ಕಾಗಿ ಜನಸಮೂಹ ಜಮಾಯಿಸಿದ್ದಾಗ ಈ ದಾಳಿ ನಡೆದಿದೆ. ಮುಸ್ಲಿಂ ಉಗ್ರ ಸಂಘಟನೆ ಐಸಿಸ್‌ ದಾಳಿ ತನ್ನ ಕೃತ್ಯ ಎಂದು ತಯನ್ನ ಟೆಲಿಗ್ರಾಮ್‌ ಚಾನೆಲ್‌ನಲ್ಲಿ ಹೇಳಿಕೊಂಡಿದೆ.
ಸ್ಫೋಟದ ಬಿರುಸಿಗೆ ಸಭಾಗೃಹದ ಸೂರು ಕಳಚಿಬಿದ್ದಿದೆ. ಸಭಾಗೃಹಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮ ನೂರಾರು ಮಂದಿ ಒಳಗೆ ಸಿಕ್ಕಿ ಹಾಕಿಕೊಂಡಿದ್ದರು. ರಕ್ಷಣಾ ಕಾರ್ಯ ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚು ಸಾಧ್ಯತೆಯಿದೆ ಎನ್ನಲಾಗಿದೆ. ದಾಳಿ ಎಸಗಿದ ಎಲ್ಲ ಉಗ್ರರು ಸುರಕ್ಷಿತವಾಗಿ ತಮ್ಮ ತಾಣ ಸೇರಿಕೊಂಡಿದ್ದಾರೆ ಎಂದು ಇಸ್ಲಾಮಿಕ್‌ ಸ್ಟೇಟ್‌ ಹೇಳಿಕೊಂಡಿದೆ.









































































































error: Content is protected !!
Scroll to Top