ಕಾರ್ಕಳ : ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಮಾ. 18ರಂದು ಆಚರಿಸಲಾಯಿತು. ಇಂದು ಮಹಿಳೆ ತನ್ನ ಛಾಪನ್ನು ಎಲ್ಲಾ ಕ್ಷೇತ್ರಗಳಲ್ಲು ತೊಡಗಿಸಿಕೊಂಡು ಸಮಾಜದಲ್ಲಿ ಮುಂಚೂಣಿಯಲ್ಲಿದ್ದಾಳೆ. ತೊಟ್ಟಿಲು ತೂಗುವ ಕೈ ಜಗತ್ತನ್ನೆ ಆಳಬಲ್ಲದು ಎನ್ನುವ ದಾರ್ಶನಿಕರ ಮಾತಿನಂತೆ, ಅಡುಗೆ ಮನೆಯಿಂದ ಬಾಹ್ಯಾಕಾಶದೆಡೆಗೆ ಹೆಜ್ಜೆಯನ್ನಿಟ್ಟು ಸಮಾಜದಲ್ಲಿ ಯಶಸ್ವಿ ಜೀವನವನ್ನು ನಡೆಸುತ್ತಿರುವ ಮಹಿಳೆಯರಿಗೆಲ್ಲರಿಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯವನ್ನು ಮಂಡಳಿಯ ಅಧ್ಯಕ್ಷೆ ನಳಿನಿ ವಿಜೇಂದ್ರ ತಿಳಿಸಿದರು.

ಬಳಿಕ ವಿಶ್ವಕರ್ಮ ಸಮಾಜದ ಆದರ್ಶಪ್ರಾಯರು, ಹಿರಿಯರಾದ ಲೀಲಾವತಿ ದಾಸಪ್ಪ ಪುರೋಹಿತ್ ಇವರನ್ನು ಮಂಡಳಿ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಂಡಳಿಯ ಗೌರವಾಧ್ಯಕ್ಷೆ ಜ್ಯೋತಿ ರವಿ, ಉಪಾಧ್ಯಕ್ಷೆ ಕವಿತಾ ಹರೀಶ್, ಕಾರ್ಯದರ್ಶಿ ಗೀತಾ ಚಂದ್ರ, ಕೋಶಾಧಿಕಾರಿ ಜ್ಯೋತಿ ರಮೇಶ್ ಮತ್ತು ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.











































































