ನಿಟ್ಟೆ ಬಿಲ್ಲವ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ : ನಿಟ್ಟೆ ಬಿಲ್ಲವ ಸಂಘದ 8ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಮಾ. 16ರಂದು ನಿಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪರಿಸರದಲ್ಲಿ ಜರುಗಿತು. ನಾರಾಯಣ ಶಾಂತಿ ಅವರ ನೇತ್ರತ್ವದಲ್ಲಿ ನಾರಾಯಣ ಗುರು ಸ್ವಾಮಿ ಪೂಜೆ ನೆರವೇರಿತು.
ದಿಕ್ಸೂಚಿ ಭಾಷಣ ಮಾಡಿದ ಕುದ್ರೋಳಿ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಕೇಶವ ಬಂಗೇರ, ವಿದ್ಯೆಯಿಂದ ಸ್ವತಂತ್ರರಾಗಿರಿ ಎನ್ನುವ ಮೂಲಕ ಲೋಕಕ್ಕೆ ಶಿಕ್ಷಣದ ಮಹತ್ವವನ್ನು ನಾರಾಯಣ ಗುರುಗಳು ತಿಳಿಸಿದರು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.

65 ವಿದ್ಯಾರ್ಥಿಗಳಿಗೆ 1 ಲಕ್ಷದ 95 ಸಾವಿರ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಇದೇ ಸಂದರ್ಭ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರವೀಣ್‌ ಸಾಲ್ಯಾನ್ ವಹಿಸಿದ್ದರು. ಮುಂಬೈ ಜಿಎಸ್‌ಟಿ ವಿಭಾಗದ ಅಸಿಸ್ಟೆಂಟ್‌ ಕಮಿಷನರ್‌ ಪ್ರಕಾಶ್‌ ಪೂಜಾರಿ, ಮುಂಬೈ ಉದ್ಯಮಿ ದಿವಾಕರ ಸುವರ್ಣ ಮೈಲಾಜೆ, ಅರುಣ್‌ ಕುಮಾರ್‌ ನಿಟ್ಟೆ, ಚೇತನ್‌ ಕೆ. ಕೋಟ್ಯಾನ್‌, ಸಂಘದ ಗೌರವಧ್ಯಾಕ್ಷ ಮಹಾಬಲ ಸುವರ್ಣ, ಕಾರ್ಯದರ್ಶಿ ಉದಯ್‌ ಕುಮಾರ್‌, ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಾ ವಿನಯ್‌ ಕುಮಾರ್‌ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಅನುಷಾ ಪ್ರಾರ್ಥಿಸಿದರು. ರಜತ್‌ ಸ್ವಾಗತಿಸಿ, ಸುದಿನ್ ಕಾಂತಾವರ ನಿರೂಪಿಸಿದರು.





















































































































































error: Content is protected !!
Scroll to Top