ಕಾರ್ಕಳ : ರಂಗಸಂಸ್ಕೃತಿ ಕಾರ್ಕಳ ಇದರ ದಶಮಾನೋತ್ಸವ ಪ್ರಯುಕ್ತ ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವ ದಶರಂಗ ಸಂಭ್ರಮ ಮಾ. 21ರಿಂದ 24ವರೆಗೆ ಕಾರ್ಕಳದ ಬಿ. ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ.
ಮಾ. 21ರಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡಬಿದ್ರೆಯವರು ಅಭಿನಯನದಲ್ಲಿ ಡಾ| ಜೀವನ್ ರಾಮ್ ಸುಳ್ಯ ನಿರ್ದೇನದ “ನಾಯಿಮರಿ ನಾಟಕ”, ಮಾ. 22 ರಂದು ಖ್ಯಾತ ಸಾಹಿತಿ ವೈದೇಹಿ ರಚನೆಯ ಡಾ. ಶ್ರೀಪಾದ್ ಭಟ್ ನಿರ್ದೇಶನದ ʼನಟನ ಮೈಸೂರು’ ಅಭಿನಯಿಸಿರುವ “ಕಣಿವೆಯ ಹಾಡು” ಮಾ. 23ರಂದು ಗಣೇಶ್ ಮಂದರ್ತಿ ನಿರ್ದೇಶನದ “ಚೋಮನ ದುಡಿ” ಮತ್ತು ಮಾ. 24ರಂದು ಶಶಿರಾಜ್ ಕಾವೂರು ನಿರ್ದೇಶನದ “ದಟ್ಸ್ ಆಲ್ ಯುವರ್ ಆನರ್” ನಾಟಕ ಪ್ರದರ್ಶನಗೊಳ್ಳಲಿದೆ. ಪ್ರತಿದಿನ ಸಂಜೆ 6-45ಕ್ಕೆ ನಾಟಕ ಆರಂಭಗೊಳ್ಳಲಿದೆ ಎಂದು ರಂಗಸಂಸ್ಕೃತಿಯ ಅಧ್ಯಕ್ಷ ನಿತ್ಯಾನಂದ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ. 21-24 : ರಾಜ್ಯಮಟ್ಟದ ನಾಟಕೋತ್ಸವ “ದಶರಂಗ ಸಂಭ್ರಮ”























