ಬಾಯಿ ಹುಣ್ಣು ಹಾಗು ನಾಲಿಗೆ ಹುಣ್ಣು

ಬೇಸಿಗೆಯಲ್ಲಿ ಉಷ್ಣ ಅಧಿಕವಾಗಿರುವುದರಿಂದ ಕೆಲವರಿಗೆ ಬಾಯಿಹುಣ್ಣು ಹಾಗು ನಾಲಿಗೆ ಹುಣ್ಣು ಆಗುವುದನ್ನು ಕಾಣುತ್ತೇವೆ. ಇದು ಅತ್ಯಂತ ಕಿರಿಕಿರಿ ಹಾಗೂ ನೋವುಂಟು ಮಾಡುತ್ತದೆ. ಉಪ್ಪು, ಬಿಸಿ, ಖಾರ, ಮಸಾಲೆ ಸೇವಿಸುವಾಗ ಉರಿ ಹಾಗೂ ನೋವು ಕಾಣಿಸಿಕೊಳ್ಳುತ್ತದೆ.
ಇದರ ಕಾರಣ ಹಾಗೂ ಪರಿಹಾರವನ್ನು ತಿಳಿದುಕೊಳ್ಳೋಣ.

ಏನಿದು ಬಾಯಿ ಹುಣ್ಣು ಹಾಗು ನಾಲಿಗೆ ಹಣ್ಣು :
ವಸಡಿನ ಮೇಲೆ ಸಣ್ಣ ಸಣ್ಣ ಗಾಯಗಳಿಗೆ ಬಾಯಿ ಹುಣ್ಣು ಎನ್ನುತ್ತೇವೆ. ಇದೇ ರೀತಿ ನಾಲಿಗೆ ಮೇಲೆ ಆದಾಗ ಅದನ್ನು ನಾಲಿಗೆ ಹುಣ್ಣು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಯಾವುದೇ ಚಿಕಿತ್ಸೆ ಮಾಡದೆನೆ ವಾಸಿಯಾಗುತ್ತದೆ. ಆದರೆ ನೋವು ಹಾಗೂ ಉರಿ ಇರುವುದರಿಂದ ಮದ್ದನ್ನು ತೆಗೆದುಕೊಳ್ಳುವುದು ಒಳ್ಳೆಯದು. ಅನೇಕ ದಿನಗಳವರೆಗೆ ವಾಸಿಯಾಗದಿದ್ದರೆ ವೈದ್ಯರನ್ನು ಭೇಟಿ ನೀಡಿರುವುದು ಅವಶ್ಯಕ. ಇತರ ಕಾರಣಗಳಿಂದಾಗಿ ಕೂಡ ಇದು ಆಗಬಹುದು.

ಕಾರಣಗಳು :
ಇದಕ್ಕೆ ಅನೇಕ ಕಾರಣಗಳು ಇವೆ. ಮಲಬದ್ಧತೆ, ಅಜೀರ್ಣ, ಅಧಿಕ ಪಿತ್ತ, ನಿದ್ರಾ ಹೀನತೆ, ಉಪ್ಪು, ಖಾರ, ಮಸಾಲೆ ಪದಾರ್ಥಗಳ ಅಧಿಕ ಸೇವನೆ, ಧೂಮಪಾನ, ವಿಟಮಿನ್ ʼಸಿʼ ಹಾಗು ʼಬಿʼ ನ ಕೊರತೆ, ಕಬ್ಬಿನಾಂಶದ ಕೊರತೆ, ಮಹಿಳೆಯರಲ್ಲಿ ಹಾರ್ಮೋನಲ್ ಇಂಬ್ಯಾಲೆನ್ಸ್‌ನಿಂದಾಗಿ ನಾಲಿಗೆ ಹುಣ್ಣು ಹಾಗೂ ಬಾಯಿ ಹುಣ್ಣು ಉಂಟಾಗುತ್ತದೆ.

ಏನು ಮಾಡಬೇಕು –
ಮೊದಲಿಗೆ ಕಾರಣಗಳನ್ನು ದೂರ ಮಾಡಿ.
ಬಾಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಮಲಬದ್ಧತೆಯನ್ನು ನಿವಾರಿಸಿ.
ಆಹಾರ ಪದ್ಧತಿಯನ್ನು ಬದಲಿಸಿ, ಮಸಾಲೆಯುಕ್ತ ಆಹಾರಯನ್ನು ಸೇವಿಸುವುದನ್ನು ಕಡಿಮೆ ಮಾಡಿ. |
ಹಾಲು, ತುಪ್ಪ, ಹಣ್ಣು ತರಕಾರಿಗಳನ್ನು, ಎಳೆನೀರು, ಬಾರ್ಲಿ ನೀರು, ಲಾವಂಚದ ನೀರನ್ನು ಸೇವಿಸಿ.
ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿಯ ರಸವನ್ನು ಎರಡು ಚಮಚ ಅದರ ಜೊತೆ ಎರಡು ಚಮಚ ನೀರನ್ನು ಬೆರೆಸಿ ಸೇವಿಸಿ.
ಒಂದು ಚಮಚ ಜೇನುತುಪ್ಪವನ್ನು ಸೇವಿಸಿ.
ಲಾವಂಚ ಬೇರನ್ನು ನೀರಿನಲ್ಲಿ ನೆನೆಸಿಟ್ಟು ಆ ನೀರನ್ನು ಸೇವಿಸಿ.
ಹುಣ್ಣಿಗೆ ತುಪ್ಪ ಅಥವಾ ತೆಂಗಿನ ಎಣ್ಣೆ ಅಥವಾ ಜೇನುತುಪ್ಪವನ್ನು ಹಚ್ಚಿ.
ಬಸಳೆ ಎಲೆಯ ರಸವನ್ನು ಹಚ್ಚಬಹುದು.
ಶ್ರೀಗಂಧ ಹಚ್ಚುವುದರಿಂದ ಗುಣವಾಗುವುದು.
ಗುಲಾಬಿ ಹೂವಿನ ರಸವನ್ನು ಹಚ್ಚಿದರೆ ಒಳ್ಳೆಯದು.
ಯಾವುದರಿಂದಲೂ ನಿಲ್ಲದಿದ್ದರೆ ವೈದ್ಯರನ್ನು ಭೇಟಿ ನೀಡಿ.

















































error: Content is protected !!
Scroll to Top