ಸಣ್ಣ ಸಣ್ಣ ತರಬೇತಿಗಳು ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗುತ್ತದೆ – ಗುರುಶಾಂತಪ್ಪ

ಕಾರ್ಕಳ : ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಪ್ಠಾನ ಮಂಗಳೂರು, ಬ್ಯಾಂಕ್ ಆಫ್ ಬರೋಡ ಮತ್ತು ಎನ್.ಆರ್.ಎಲ್.ಎಮ್ ಕಾರ್ಕಳ ಇವರ ಆಶ್ರಯದಲ್ಲಿ ಸಂಜೀವಿನಿ ಗುಂಪಿನ ಮಹಿಳಾ ಸದಸ್ಯರಿಗೆ ಮೂರು ದಿನಗಳ ಅಲಂಕಾರಿಕ ಕ್ಯಾಂಡಲ್, ಫಿನಾಯಿಲ್ ಮತ್ತು ಸಾಬೂನು ತಯಾರಿಕೆಯ ತರಭೇತಿಯ ಉದ್ಘಾಟನಾ ಕಾರ್ಯಕ್ರಮ ಕಾರ್ಕಳ ತಾಲೂಕು ಪಂಚಾಯತ್‌ನಲ್ಲಿ ನಡೆಯಿತು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹಿಂದೆ ಪುರುಷ ಪ್ರಧಾನವಾದ ಕಾಲವಿತ್ತು. ಆದರೆ ಪ್ರಸ್ತುತ ಮಹಿಳೆಯರು ತಮ್ಮ ಕಾಲ ಮೇಲೆ ತಾವೇ ನಿಲ್ಲುವಷ್ಟು ಬಲಿಷ್ಠರಾಗಿದ್ದಾರೆ. ಯಾವುದೇ ಸಮಸ್ಯೆ ಎದುರಾದರೂ ಅವರು ಎದಗುಂದದೆ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳುವಷ್ಟು ಸಮರ್ಥರಾಗಿದ್ದಾರೆ. ಇಂತಹ ತರಬೇತಿಯಿಂದ ಇಂದಾಗುವ ಸಣ್ಣ ಮಟ್ಟದ ಸುಧಾರಣೆಗಳು ಮುಂದೊಂದು ದಿನ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಳೂರಿನ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಾರ್ಯನಿರ್ವಾಹಣಾಧಿಕಾರಿ ಸಚ್ಚಿನ್ ಹೆಗ್ಡೆ ಮಾತನಾಡಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನೀನಾ ಶೆಟ್ಟಿ ಮಾತನಾಡಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಭಾರತೀಯ ವಿಕಾಸ ಟ್ರಸ್ಟಿನ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಸ್ವಾಗತಿಸಿ, ಬಿವಿಟಿ ಮತ್ತು ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆಗೈದರು. ಎನ್.ಆರ್.ಎಲ್.ಎಮ್‌ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಉಮಾ ಕಾರ್ಯಕ್ರಮ ನಿರ್ವಹಿಸಿದರು. ಎನ್.ಆರ್.ಎಲ್.ಎಮ್.ನ ಸೂಪವೈಸರ್ ಬಬಿತಾ, ಮತ್ತು ಬಿಆರ್‌ಪಿ ಜೀವಿತಾ ಸಹಕರಿಸಿದರು. ಕಾರ್ಕಳ ತಾಲೂಕಿನ ಅಸುಪಾಸಿನ ಸುಮಾರು 45 ಕ್ಕೂ ಹೆಚ್ಚು ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದರು.









































































































error: Content is protected !!
Scroll to Top