ಕಜ್ಕೆ ಶಾಖಾಮಠದಲ್ಲಿ ಅನ್ನದಾಸೋಹ ಯೋಜನೆಯ ಕುರಿತು ಚಿಂತನೆ : ಶಿವಸುಜ್ಞಾನತೀರ್ಥ ಸ್ವಾಮೀಜಿ

ಹೆಬ್ರಿ : ಕಜ್ಕೆ ಶಾಖಾಮಠದಲ್ಲಿ ಶ್ರೀಅನ್ನಪೂರ್ಣೇಶ್ವರಿ ಶಿಲಾಮಯ ದೇವಸ್ಥಾನ ಲೋಕಾರ್ಪಣೆ ಮತ್ತು ಶ್ರೀ ಗಣಪತಿ ದೇವರು, ಶ್ರೀ ಆದಿಶಂಕರಾಚಾರ್ಯರ ಶಿಲಾಬಿಂಬ ಪ್ರತಿಷ್ಠೆ ಹಾಗೂ ನಾಗದೇವರ ಸನ್ನಿಧಿಯ ಶಿಲಾಬಿಂಬ ಪ್ರತಿಷ್ಠೆ, ಮಹಾಕುಂಭಾಭಿಷೇಕವು ಶ್ರೀವಿಶ್ವಕರ್ಮ ಜಗದ್ಗುರು ಶ್ರೀಶ್ರೀಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಕಾರ್ಯವು ಜರುಗಿದ್ದು, ಈ ಹಿನ್ನೆಲೆಯಲ್ಲಿ ಶ್ರೀದೇವಿಯ ದರ್ಶನಕ್ಕಾಗಿ ಆಗಮಿಸುವ ವಿವಿಧ ಭಾಗದ ಭಕ್ತಾದಿಗಳ ಅನುಕೂಲತೆಗೆ ತಕ್ಕಂತೆ ಪ್ರತಿದಿನವು ಮಧ್ಯಾಹ್ನದ ಅನ್ನದಾಸೋಹ ಮಾಡುವ ಯೋಜನೆಯನ್ನು ಮಾಡುವ ಕುರಿತಂತೆ ಚಿಂತನೆ ನಡೆಸಲಾಗುವುದು ಎಂದು ಮಹಾಸ್ವಾಮೀಜಿ ತಿಳಿಸಿದರು.

ಫೆ. 29ರಂದು ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಯಂ ಸೇವಕರ, ವಿವಿಧ ಸಮಿತಿಯ ಪದಾಧಿಕಾರಿಗಳ ಮತ್ತು ನಿರ್ಮಾಣ ಸಮಿತಿಯ ಸದಸ್ಯರ ಸಭೆಯನ್ನುದ್ದೇಶಿಸಿ ಮಹಾಸ್ವಾಮೀಜಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜೇಶ್‌ ಆಚಾರ್ಯ ಮಠದಬೆಟ್ಟು, ಕಲ್ಗೋಳಿ ವಿಶ್ವನಾಥ ಆಚಾರ್ಯ, ಸ್ಥಳದಾನಿಗಳಾದ ಕೃಷ್ಣಯ್ಯ ಶೆಟ್ಟಿ, ಶ್ರೀಧರ ಕಾಮತ್‌, ಬಾಲಕೃಷ್ಣ ಶೆಟ್ಟಿ, ಕಾಶಿನಾಥ ಶೆಣೈ, ಖಜಾನೆ ಸುಕುಮಾರ ಆಚಾರ್ಯ ಮುನಿಯಾಲು, ಶಿವಪುರ ರತ್ನಾಕರ ಆಚಾರ್ಯ, ಮಿಯ್ಯಾರು ಜಯರಾಂ ಆಚಾರ್ಯ, ಮುದ್ರಾಡಿ ಕೇಶವ ಆಚಾರ್ಯ, ಪಕ್ಕಾಲು ರವೀಂದ್ರ ಆಚಾರ್ಯ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.













































































error: Content is protected !!
Scroll to Top