ಕಣಜಾರು ಪ್ರೌಢಶಾಲೆಗೆ ಪಿಠೋಪಕರಣಗಳ ಹಸ್ತಾಂತರ

ಕಾರ್ಕಳ : ಕಣಜಾರು ಶ್ರೀ ಆನಂದ ಶೆಟ್ಟಿ ಸರಕಾರಿ ಪ್ರೌಢಶಾಲೆಗೆ ಸುಮಾರು 2 ಲಕ್ಷ ರೂ. ವೆಚ್ಚದ ಡೆಸ್ಕ್‌, ಬೆಂಚ್‌ಗಳನ್ನು ಫೆ. 20ರಂದು ಶಾಲಾ ಹಳೆ ವಿದ್ಯಾರ್ಥಿಗಳು ಹಸ್ತಾಂತರಿಸಿದರು. ಈ ಸಂದರ್ಭ ಹಿರಿಯರಾದ ವಿಕ್ರಂ ಹೆಗ್ಡೆ ಹಾಗೂ ಭಾಸ್ಕರ್‌ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಂದೀಪ್‌ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ರಂಜಿತ್‌ ಶೆಟ್ಟಿ, ಮಾಜಿ ಅಧ್ಯಕ್ಷ ಸುಧಾಕರ ಆಚಾರ್ಯ, ಕಿಶೋರ್‌ ಶೆಟ್ಟಿ, ಎಸ್‌ಡಿಎಂಸಿ ಸದಸ್ಯರಾದ ಉದಯ್‌ ಶೆಟ್ಟಿ, ಶೋಭಾ ಆಚಾರ್ಯ, ಮುಖ್ಯ ಶಿಕ್ಷಕಿ ನವೀನ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕರಾದ ಪ್ರವೀಣ್‌ ಪಿಂಟೋ ಸ್ವಾಗತಿಸಿ, ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್‌ ಆಚಾರ್ಯ ವಂದಿಸಿದರು. ಇದೇ ಸಂದರ್ಭ ಶಿಕ್ಷಕಿ ಪ್ರತಿಮಾ ಪ್ರಸಕ್ತ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಯ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಾಹಿತಿ ನೀಡಿದರು.





























































































































error: Content is protected !!
Scroll to Top