ನೇಜಾರು ಕೊಲೆ ಪ್ರಕರಣ : ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ

ಉಡುಪಿ : ನಗರದ ನೇಜಾರು ಸಮೀಪ ತೃಪ್ತಿ ಲೇಔಟ್‌ನಲ್ಲಿ ಕಳೆದ ನ.12ರಂದು ನಡೆದ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಚಾರ್ಜ್‌ಶೀಟನ್ನು ಪೊಲೀಸರು ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ನವೆಂಬರ್ 12ರಂದು ಬೆಳಗ್ಗೆ ತಾಯಿ ಹಸೀನಾ ಮತ್ತು ಮೂವರು ಮಕ್ಕಳ ಕೊಲೆ ನಡೆದಿದ್ದು, ಮಲ್ಪೆ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದರು. ಈಗಾಗಲೇ ತನಿಖೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮತ್ತು ಚಾರ್ಜ್‌ಶೀಟ್ ಸಲ್ಲಿಸಲು ಫೆ.12 ಕೊನೆಯ ದಿನವಾಗಿದ್ದ ಕಾರಣ ಶನಿವಾರ ಪ್ರಕರಣದ ತನಿಖಾಧಿಕಾರಿಯಾಗಿರುವ ಮಲ್ಪೆ ವೃತ್ತ ನಿರೀಕ್ಷಕರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಈ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಉದ್ಯೋಗಿಯಾಗಿದ್ದ ಪ್ರವೀಣ್‌ ಚೌಗುಲೆ ತನ್ನ ಸಹೋದ್ಯೋಗಿ ಯುವತಿ ಮೇಲಿನ ಮೋಹದಿಂದ ಆಕೆಯ ಇಡೀ ಕುಟುಂಬವನ್ನು ಕೊಂದು ಹಾಕಿದ್ದಾನೆ. ದೀಪಾವಳಿ ಹಬ್ಬದಂದೇ ನಡೆದ ಈ ಘಟನೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಎರಡೇ ದಿನಗಳಲ್ಲಿ ಆರೋಪಿಯನ್ನು ಬಂಧಿಸುವ ಮೂಲಕ ಪೊಲೀಸರು ಕಾರ್ಯದಕ್ಷತೆ ಮೆರೆದಿದ್ದರು.































































































































error: Content is protected !!
Scroll to Top