ಆರೋಗ್ಯಧಾರಾ – ಮೂಗು ಕಟ್ಟುವಿಕೆಗೆ ಮನೆಮದ್ದು

ಚಳಿಗಾಲದಲ್ಲಿ ಮೂಗು ಕಟ್ಟುವುದು, ಉಸಿರಾಡಲು ಕಷ್ಟವಾಗುವುದು ಸಾಮಾನ್ಯ. ವಾತಾವರಣ ತಂಪಾಗಿರುವುದರಿಂದ ಹಾಗು ವಾತದೋಷದ ವೃದ್ಧಿಯಿಂದ ಈ ಸಮಸ್ಯೆ ಸಂಭವಿಸುತ್ತದೆ. ಇದರ ಬಗ್ಗೆ ತಿಳಿದುಕೊಳ್ಳೋಣ.

ಕಾರಣಗಳು
ಇದಕ್ಕೆ ಹಲವು ಕಾರಣಗಳಿವೆ. ವಾತಾವರಣದ ಬದಲಾವಣೆ, ಸೋಂಕು, ಅಲರ್ಜಿ, ಉರಿಯೂತ, ಕಟ್ಟಿದ ಮೂಗಿಗೆ ಕಾರಣಗಳು.

ಪರಿಹಾರಗಳು
ಅರಿಶಿಣ ನೆಗಡಿ, ಕೆಮ್ಮು, ಕಟ್ಟಿದ ಮೂಗು, ಅಲರ್ಜಿಗೆ ಸೂಕ್ತವಾದ ಔಷಧ.

•ಅರಿಶಿಣ ಕೊಂಬಿನ ಹಬೆ ತೆಗೆದುಕೊಳ್ಳುವುದು ಅತ್ಯುತ್ತಮ ಪರಿಹಾರವಾಗಿದೆ. ಅರಿಶಿಣ ಕೊಂಬನ್ನು ಸುಟ್ಟು ಅದರ ಹಬೆಯನ್ನು ತೆಗೆದುಕೊಳ್ಳುವುದು ಅತ್ಯಂತ ಉಪಯೋಗಕಾರಿ. ಇದರಿಂದ ಮೂಗು ತೆರೆದುಕೊಳ್ಳಲು ಸಹಾಯವಾಗುತ್ತದೆ.

*ಅರಿಶಿಣ ಹಾಲು ಸೇವಿಸುವುದು ಇನ್ನೊಂದು ಪರಿಹಾರ. ಒಂದು ಲೋಟ ಬಿಸಿ ಹಾಲಿಗೆ ಕಾಲು ಚಮಚ ಅರಿಶಿಣ ಪುಡಿ ಮತ್ತು ಕಲ್ಲುಸಕ್ಕರೆ ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಿ.

•ಅರಿಶಿನ ಕಷಾಯ – ಒಂದು ಲೋಟ ನೀರಿಗೆ ಕಾಲು ಚಮಚ ಅರಿಶಿಣ ಪುಡಿ, ಒಂದು ಬೆಲ್ಲದ ತುಂಡು, ಒಂದು ಚಮಚ ಕರಿಮೆಣಸಿನ ಹುಡಿ, 4-5 ತುಳಸಿ ಎಲೆ. ಇದನ್ನು ಸರಿಯಾಗಿ ಕಾಲು ಬಾಗ ಬರುವವರೆಗೆ ಕುದಿಸಿ ಸೋಸಿ ಸ್ವಲ್ಪ ಹಾಲನ್ನು ಬೆರೆಸಿ ಸೇವಿಸಿರಿ.

ಶುಂಠಿ ಕಷಾಯ – ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ, ಒಂದು ಚಮಚ ಕೊತ್ತಂಬರಿ ಹಾಕಿ ಸರಿಯಾಗಿ ಕುದಿಸಿ ಕಾಲು ಗ್ಲಾಸ್ ಬರುವವರೆಗೆ ಕುದಿಸಿ ಸೋಸಿ ಅದಕ್ಕೆ ಬೆಲ್ಲವನ್ನು ಬೆರೆಸಿ ಸೇವಿಸಿರಿ.

•ತುಳಸಿ ಎಲೆಯನ್ನು ಸೇವಿಸಿ. ನಾಲ್ಕೈದು ತುಳಸಿ ಎಲೆಯನ್ನು ದಿನಾಲು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಹಾಗೂ ತೊಂದರೆ ಇಲ್ಲದೆ ಉಸಿರಾಡಲು ಸಹಾಯ ಮಾಡುತ್ತದೆ.

•ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಣು ತೈಲದ ಎರಡೆರಡು ಬಿಂದು ಮೂಗಿಗೆ ಹಾಕಿದರೆ ಮೂಗು ಕಟ್ಟುವಿಕೆ ನಿವಾರಣೆಯಾಗುವುದು. ಆಯುರ್ವೇದದಲ್ಲಿ ನಸ್ಯ ಚಿಕಿತ್ಸೆ ಕೂಡ ಮಾಡಲಾಗುತ್ತದೆ.

•ನೀಲಗಿರಿ ಎಣ್ಣೆಯ ಹಬೆ ಸೇವನೆ ಕೂಡ ಒಳ್ಳೆಯ ಪರಿಣಾಮ ನೀಡುತ್ತದೆ. ಒಂದು ಪಾತ್ರೆಯಲ್ಲಿ ಕುದಿಯುವ ನೀರಿನಲ್ಲಿ ನಾಲ್ಕೈದು ತೊಟ್ಟು ನೀಲಗಿರಿ ಎಣ್ಣೆಯನ್ನು ಹಾಕಿ ಆ ಹಬೆಯನ್ನು ತೆಗೆದುಕೊಳ್ಳಿ. ಉತ್ತಮ ಪರಿಣಾಮ ನೀಡುತ್ತದೆ.

•ಯೋಗಾಸನಗಳನ್ನು ನಿತ್ಯ ಮಾಡಿ. ಪದ್ಮಾಸನ, ಬಾಲಾಸನ, ಚಕ್ರಾಸನ, ಅಧೋಮುಖ ಶ್ವಾನಾಸನ, ಮತ್ಸ್ಯಾಸನ, ಉಷ್ಟ್ರಾಸನ ಕಟ್ಟಿದ ಮೂಗಿಗೆ ಒಳ್ಳೆಯದು. ಪ್ರಾಣಾಯಾಮದಲ್ಲಿ ಅನುಲೋಮ ವಿಲೋಮ ಪ್ರಾಣಾಯಾಮ, ಕಪಾಲಭಾತಿ, ನಾಡಿಶೋಧನ ಪ್ರಾಣಾಯಾಮ ಮೂಗು ಕಟ್ಟುವಿಕೆಗೆ ಒಳ್ಳೆಯದು.

•ಬಿಸಿ ಆಹಾರ ಸೇವಿಸಿ. ಅಡುಗೆಯಲ್ಲಿ ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ಕರಿಮೆಣಸು ಬಳಸಿ.

•ಒಂದು ಚಮಚ ಜೇನುತುಪ್ಪವನ್ನು ಹದ ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ.

•ಕರ್ಪೂರಾದಿ ತೈಲವನ್ನು ಎದೆಯ ಮೇಲೆ ಹಾಗೂ ಬೆನ್ನಿನ ಮೇಲೆ ಹಚ್ಚಿಕೊಳ್ಳಿ. ಇದು ಸುರಕ್ಷಿತ ಹಾಗೂ ಒಳ್ಳೆಯ ಪರಿಣಾಮ ನೀಡುತ್ತದೆ.

•ಆಯುರ್ವೇದ ಔಷಧಗಳು – ತ್ರಿಕಟು ಚೂರ್ಣ, ಚತುರ್ಜಾತ ಚೂರ್ಣ, ತಾಲೀಸಾದಿ ಚೂರ್ಣ, ಸೀತೋ ಪಲಾದಿ ಚೂರ್ಣ, ಖದಿರಾದಿವಟಿ ಮುಂತಾದವುಗಳು.









































































































error: Content is protected !!
Scroll to Top