ರಸ್ಲಿಂಗ್‌ – ಕಾರ್ಕಳದ ಪ್ರಸಾದ್ ಪೂಜಾರಿ ರಾಷ್ಟ್ರ ಮಟ್ಟಕ್ಕೆ

ಕಾರ್ಕಳ : ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪಂಜ ಕುಸ್ತಿ(ಆರ್ಮ್ ರಸ್ಲಿಂಗ್) ಸ್ಪರ್ಧೆಯಲ್ಲಿ ಕಾರ್ಕಳ ಜೋಡುರಸ್ತೆಯ ಪ್ರಸಾದ್ ಪೂಜಾರಿ ಅವರು 2 ಬೆಳ್ಳಿ ಹಾಗೂ 1 ಕಂಚಿನ ಪದಕ ಪಡೆದಿದ್ದಾರೆ. ಈ ಮೂಲಕ ಪ್ರಸಾದ್‌ ಅವರು ಮಹಾರಾಷ್ಟ್ರದ ನಾಗಪುರದಲ್ಲಿ ಜೂನ್‌ 6ರಿಂದ 10ರವರೆಗೆ ನಡೆಯಲಿರುವ ರಾಷ್ಟ್ರ ಮಟ್ಟದ ಪಂಜ ಕುಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಫ್ರೆಂಡ್ಸ್‌ ಪವರ್‌ ಜಿಮ್‌ನ ಮೊಹಮದ್ ಅಲಿಯವರಿಂದ ತರಬೇತಿ ಪಡೆದಿರುತ್ತಾರೆ. ಜೋಡುರಸ್ತೆ ನಿವಾಸಿ ಪ್ರೇಮ ಪೂಜಾರಿಯವರ ಪುತ್ರನಾಗಿರುವ ಈತ ಪ್ರಸ್ತುತ ಉಡುಪಿಯ ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ.





























































































































error: Content is protected !!
Scroll to Top