ಉಡುಪಿ, ಕಾರವಾರದಲ್ಲಿ ಮಾತ್ರ ನಿಲುಗಡೆ
ಮಂಗಳೂರು : ಮಂಗಳೂರು-ಗೋವಾ ನಡುವೆ ವಂದೇ ಭಾರತ್ ರೈಲಿನ ಪ್ರಾಯೋಗಿಕ ಓಡಾಟ ಯಶಸ್ವಿಯಾಗಿದ್ದು, ನಾಳೆಯಿಂದ ನಿಯಮಿತ ವಂದೇ ಭಾರತ್ ಸಂಚಾರ ಪ್ರಾರಂಭವಾಗಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಮಂಗಳೂರು – ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ 6 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಮಂಗಳೂರು – ಮಡಗಾಂವ್ ರೈಲು 320 ಕಿಮೀ ಪ್ರಾಯೋಗ ಸಂಚಾರ ನಡೆಸಿದೆ.
ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಈಗಾಗಲೇ ನಡೆದಿದ್ದು, ಯಶಸ್ವಿಯಾಗಿದೆ. ರೈಲಿನ ಆರಂಭಿಕ ಸಂಚಾರಕ್ಕೆ ದಕ್ಷಿಣ ರೈಲ್ವೆ ವಲಯವು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳೂರು – ಮಡಗಾಂವ್ ನಡುವೆ ಉಡುಪಿ ಮತ್ತು ಕಾರವಾರದಲ್ಲಿ ಮಾತ್ರ ಎರಡು ನಿಲುಗಡೆಗಳು ಇರಲಿವೆ. ಇದು ಕರ್ನಾಟಕಕ್ಕೆ ನಾಲ್ಕನೇ ವಂದೇ ಭಾರತ್ ಟ್ರೈನ್. ದೆಹಲಿಯಿಂದ ಕತ್ರಾ, ದೆಹಲಿಯಿಂದ ಲಕ್ನೋ ಮೂಲಕ ಅಯೋಧ್ಯೆ, ದಿಲ್ಲಿಯಿಂದ ಚಂಡೀಗಢ, ಬೆಂಗಳೂರು – ಕೊಯಮತ್ತೂರು ವಂದೇ ಭಾರತ್ ಎಕ್ಸ್ಪ್ರೆಸ್ಗಳಿಗೂ ಡಿಸೆಂಬರ್ 30ರಂದು ಚಾಲನೆ ದೊರೆಯಲಿದೆ. ಬೆಂಗಳೂರು – ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಹ ಇತ್ತೀಚೆಗೆ ಯಶಸ್ವಿ ಪ್ರಾಯೋಗಿಕ ಸಂಚಾರ ನಡೆಸಿತ್ತು.






























































