ಹೆಬ್ರಿ ಕಸಾಪದಿಂದ ಕನ್ನಡ ಡಿಂಡಿಮ

ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕ ಮತ್ತು ಕೆ.ಪಿ.ಎಸ್ ಪ್ರೌಢಶಾಲಾ ವಿಭಾಗ ಮುನಿಯಾಲು ಇದರ ಸಹಯೋಗದಲ್ಲಿ ಕನ್ನಡ ಡಿಂಡಿಮ ಸರಣಿ ಕಾರ್ಯಕ್ರಮ – 7 ಡಿ. 22 ರಂದು ಕೆ.ಪಿ.ಎಸ್ ಶಾಲೆಯಲ್ಲಿ ನಡೆಯಿತು. ಉದ್ಯಮಿ ದಿನೇಶ್‌ ಪೈ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳಲ್ಲಿ ಕನ್ನಡ ಡಿಂಡಿಮದಂತಹ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷಾಭಿಮಾನವನ್ನು ಬೆಳೆಸುವ ಕಾರ್ಯ ಶ್ಲಾಘನೀಯ ಎಂದರು.

ಉದ್ಯಮಿ ಗೋಪಿನಾಥ ಭಟ್ ಮಾತನಾಡಿ, ಕನ್ನಡಿಗರು ಎಲ್ಲೆ ಹೋದರು ಕನ್ನಡದ ಕಂಪನ್ನು ಉತ್ತೇಜಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಕಸಾಪದ ಕಾರ್ಯವೈಖರಿ ಅಭಿನಂದನಾರ್ಹ ಎಂದರು.

ಬಹುಮಾನ – ಅಭಿನಂದನೆ
ಕನ್ನಡ ಡಿಂಡಿಮ ಕಾರ್ಯಕ್ರಮದ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾಟಕ್ಕೆ ಆಯ್ಕೆಯಾದ ಕೆಪಿಎಸ್ ಮುನಿಯಾಲು ಶಾಲೆಯ ವಿದ್ಯಾರ್ಥಿ ಸೃಜನ್ (10ನೇ ತರಗತಿ) ಅವರನ್ನು ಅಭಿನಂದಿಸಲಾಯಿತು

ಕಸಾಪದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಆಶಯ ನುಡಿಗಳನ್ನಾಡಿದರು. ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಜಿ. ಪಂ. ಮಾಜಿ ಸದಸ್ಯೆ ಜ್ಯೋತಿ ಹರೀಶ್ ಪೂಜಾರಿ, ಸಹ ಮುಖ್ಯ ಶಿಕ್ಷಕ ಲಕ್ಷೀನಾರಾಯಣ ಬೋರ್ಕರ್, ಕಸಾಪದ ಗೌರವ ಕಾರ್ಯದರ್ಶಿಗಳಾದ ಡಾ. ಪ್ರವೀಣ್ ಕುಮಾರ್, ಮಂಜುನಾಥ ಕೆ. ಶಿವಪುರ, ರಾಮಚಂದ್ರ ಭಟ್ ವರಂಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವೀಣಾ ಆರ್. ಭಟ್ ಸ್ವಾಗತಿಸಿದರು. ಶೈಲಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಶೈಲಜಾ ಶಿವಪುರ ವಂದಿಸಿದರು. ಮಮತಾ ಸಹಕರಿಸಿದರು.

















































error: Content is protected !!
Scroll to Top