ಉಡುಪಿ: ಟೆಲಿಗ್ರಾಮ್ appನಲ್ಲಿ ಹಣ ತೊಡಗಿಸಿಕೊಂಡರೆ ಹೆಚ್ಚಿನ ಲಾಭ ನೀಡುವುದಾಗಿ ಬೆಳ್ಮಣ್ ಸಮೀಪ ಸೂಡದ ವ್ಯಕ್ತಿಗೆ 3.44 ಲಕ್ಷ ರೂ. ವಂಚಿಸಿದ ಕುರಿತು ದೂರು ದಾಖಲಾಗಿದೆ.
ಸೂಡ ಗ್ರಾಮದ ದಿಲೀಪ್ (56) ಎಂಬವರು ಟೆಲಿಗ್ರಾಮ್ appನಲ್ಲಿ ಹೆಚ್ಚಿನ ಲಾಭದ ಉದ್ದೇಶದಿಂದ ಹಣ ಹಾಕಿ ಈಗ ಮೋಸ ಹೋಗಿದ್ದಾರೆ. ಇವರ ವಾಟ್ಸಪ್ ನಂಬರ್‌ಗೆ ಟ್ರೇಡಿಂಗ್ ಟಾಸ್ಕ್ ಬಗ್ಗೆ ಸಂದೇಶವೊಂದು ಬಂದಿತ್ತು. ದಿಲೀಪ್ ಆ ನಂಬರನ್ನು ಸಂಪರ್ಕ ಮಾಡಿದಾಗ ಟೆಲಿಗ್ರಾಮ್ appನಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶದ ನೀಡುವುದಾಗಿ ನಂಬಿಸಿದ್ದರು.
ಅದರಂತೆ ಜೂ. 18ರಂದು ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 3,44,200 ರೂ. ಆನ್‌ಲೈನ್ ಮೂಲಕ ಜಮೆ ಮಾಡಿದ್ದರು. ಆರೋಪಿಗಳು ಲಾಭಾಂಶ ನೀಡಿಲ್ಲ, ಮಾತ್ರವಲ್ಲ ಜಮೆ ಮಾಡಿದ ಹಣವನ್ನೂ ಹಿಂತಿರುಗಿಸದೆ ಮೋಸ ಮಾಡಿದ್ದಾರೆ ಎಂದು ದಿಲೀಪ್ ದೂರು ದಾಖಲಿಸಿದ್ದಾರೆ.
ಸೂಡದ ವ್ಯಕ್ತಿಗೆ ಆನ್‌ಲೈನ್‌ನಲ್ಲಿ 3.44 ಲಕ್ಷ ರೂ. ವಂಚನೆ
























