ಚಿಗುರು ಲೇಖಕರ ವೇದಿಕೆ ನಿನಾದ – ಅಶ್ವಥ್ ಎಸ್. ಎಲ್.

ಕಾರ್ಕಳ : ಬರವಣಿಗೆಯಿಂದ ಸೃಜನ ಶೀಲ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕ್ರಿಯೇಟಿವ್ ವಿದ್ಯಾ ಸಂಸ್ಥೆಯಲ್ಲಿ ಪ್ರಾರಂಭಗೊಂಡ ನಿನಾದ ಪತ್ರಿಕೆ ವಿದ್ಯಾರ್ಥಿಗಳ ಬರವಣಿಗೆಗೆ ಪ್ರೋತ್ಸಾಹ ನೀಡುವ ಚಿಗುರು ಲೇಖಕರ ವೇದಿಕೆ ಎಂದು ಸಂಸ್ಥೆಯ ಸಂಸ್ಥಾಪಕ ಅಶ್ಚಥ್ ಎಸ್. ಎಲ್. ಅಭಿಪ್ರಾಯಪಟ್ಟರು. ಅವರು ಡಿ. 18 ರಂದು ಸಂಸ್ಥೆಯ ಆವರಣದಲ್ಲಿ ನಡೆದ ನಿನಾದ ಪತ್ರಿಕೆಯ 5ನೇ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಶ್ವಥ್ ಎಸ್. ಎಲ್. ಅವರ ಹೆತ್ತವರು ಎಸ್. ಎಮ್. ಲಿಂಗಪ್ಪ ಹಾಗೂ ರತ್ನಮ್ಮ ದಂಪತಿ ಪತ್ರಿಕೆಯನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.

ಬಹುಮಾನ‌ ವಿತರಣೆ

ನಿನಾದ ಪತ್ರಿಕೆಯಲ್ಲಿ ಲೇಖನ ಬರೆದ 15 ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಇತರೆ ವಿದ್ಯಾರ್ಥಿಗಳಿಗೆ ಬರಹ ಬರೆಯುವಂತೆ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಗಣನಾಥ ಶೆಟ್ಟಿ, ಆದರ್ಶ್‌ ಎಂ. ಕೆ., ಉಪನ್ಯಾಸಕ ರಾಘವೇಂದ್ರ ಅನುಬೆಳ್ಳೆ, ನ್ಯೂಸ್‌ ಕಾರ್ಕಳ ಜಾಹಿರಾತು ವಿಭಾಗದ ಮುಖ್ಯಸ್ಥೆ ಜ್ಯೋತಿ ರಮೇಶ್‌, ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಲೋಹಿತ್ ಎಸ್. ಕೆ. ಕಾರ್ಯಕ್ರಮ ನಿರ್ವಹಿಸಿದರು.















































































































































error: Content is protected !!
Scroll to Top