ಇಂಗ್ಲೀಷ್ ಪ್ರಬಂಧದಲ್ಲಿ ಭುವನೇಂದ್ರ ಕಾಲೇಜಿನ ಶರಣ್ಯ ತೃತೀಯ ಸ್ಥಾನ
ಕಾರ್ಕಳ : ರಾಷ್ಟ್ರೀಯ ಮತದಾನ ದಿನಾಚರಣೆ – 2024 ರ ಪ್ರಯುಕ್ತ ಅಜ್ಜರಕಾಡು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇತ್ತೀಚೆಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆ ನಡೆಯಿತು. ಭುವನೇಂದ್ರ ಕಾಲೇಜಿನ ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಟಿ. ಶರಣ್ಯ ನಾಯಕ್ ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.






































































