ಅಯೋಧ್ಯೆ ಶ್ರೀರಾಮ ಮಂದಿರ ಪ್ರತಿಷ್ಠಾ ಅಭಿಯಾನ – ತಾಲೂಕು ಸಮಾವೇಶ

ರಾಮ ಮಂದಿರ ಸನಾತನ ಧರ್ಮದ ಪುನರುತ್ಧಾನದ ಸಂಕೇತ : ಜಯರಾಮ ಪ್ರಭು

ಕಾರ್ಕಳ : ರಾಮ ಮಂದಿರ ನಿರ್ಮಾಣ ಸನಾತನ ಧರ್ಮದ ಪುನರುತ್ಥಾನದ ಸಂಕೇತ. 2024ರ ಜನವರಿಯಲ್ಲಿ ಮಂದಿರ ಲೋಕಾರ್ಪಣೆ ಗೊಳ್ಳುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ್‌ ಪ್ರಭು ಹೇಳಿದರು.
ಅವರು ಡಿ. 12ರಂದು ಕಾರ್ಕಳ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಪ್ರತಿಷ್ಠಾ ಅಭಿಯಾನ ತಾಲೂಕು ಸಮಾವೇಶದಲ್ಲಿ ಮಾತನಾಡಿದರು.

500 ವರ್ಷಗಳಿಂದ ಅಯೋ‍ಧ್ಯೆ ಜನ್ಮಭೂಮಿ ವಿವಾದದಲ್ಲಿತ್ತು. 2019ರಲ್ಲಿ ಸುಪ್ರಿಂ ಕೋರ್ಟ್‌ ತೀರ್ಪು ನೀಡುವ ಮೂಲಕ ವಿವಾದ ಬಗೆಹರಿದು ಇದೀಗ ಅಯೋ‍ಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ ಎಂದರು.

ಪ್ರಾಸ್ತವಿಕ ಮಾತುಗಳನ್ನಾಡಿದ ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಕಾರ್ಯದರ್ಶಿ ದಿನೇಶ್‌ ಮೆಂಡನ್‌, ರಾಮ ಮಂದಿರ ನಿರ್ಮಾಣ ಕನಸು ನನಸಾಗುವಲ್ಲಿ ಹಲವಾರು ಕಾರ್ಯಕರ್ತರ ಬಲಿದಾನವಾಗಿದೆ. ಮಂದಿರಕ್ಕೋಸ್ಕರ ಬಲಿದಾನಗೈದವರ ನೆನಪು ಮಾಡಿಕೊಳ್ಳುವ ಕಾರ್ಯವಾಗಬೇಕಿದೆ. ಅಯೋಧ್ಯೆ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಕಾರ್ಯವನ್ನು ಅಂದು ಸಂಘಪರಿವಾರ ನಡೆಸಿತ್ತು. ಇದೀಗ ಸಂಘ ಪರಿವಾರದ ಮೂಲಕ ಪ್ರತಿ ಮನೆಗೆ ಮಂತ್ರಾಕ್ಷತೆಯನ್ನು ವಿತರಣೆ ಮಾಡಲಾಗುತ್ತಿದೆ ಎಂದು ದಿನೇಶ್‌ ತಿಳಿಸಿದರು.

ರಾಮ ನಾಮ ಸಂಕೀರ್ತನೆ
ರಾಮ ಮಂದಿರ ಉದ್ಘಾಟನೆ ವೇಳೆ ಗ್ರಾಮ ಗ್ರಾಮದ ದೇವಸ್ಥಾನಗಳಲ್ಲಿ ರಾಮ ನಾಮ ಸಂಕೀರ್ತನೆ ನಡೆಯಬೇಕಿದೆ ಎಂದು ದಿನೇಶ್‌ ಮೆಂಡನ್‌ ತಿಳಿಸಿದರು.


ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕರಾದ ಅನಿಲ್‌ ಜೋಶಿ, ಸುರೇಶ್‌ ಹೆಜಮಾಡಿ, ಡಾ. ಉದಯ್‌ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಅನಂತಶಯನದಿಂದ ರಾಮ ನಾಮ ಸಂಕೀರ್ತನೆಯೊಂದಿಗೆ ವೆಂಕಟರಮಣ ದೇವಸ್ಥಾನದವರೆಗೆ ಮೆರವಣಿಗೆ ಸಾಗಿತು. ಅಲ್ಲಿಂದ ಮಂತ್ರಾಕ್ಷತೆ ಪಡೆದು ಮಂಜುನಾಥ ಸ್ಮಾರಕ ಸಭಾಭವನಕ್ಕೆ ಮೆರವಣಿಗೆ ಮೂಲಕ ತರಲಾಯಿತು.























































































































error: Content is protected !!
Scroll to Top