ಕಾರ್ಕಳ : ಕಳೆದ ಎರಡು ದಿನಗಳಿಂದ ಕಾರ್ಕಳದೆಲ್ಲೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಗುಡುಗಿನ ಆರ್ಭಟಕ್ಕೆ ಹಲವೆಡೆ ಹಾನಿಯಾಗಿದೆ. ಶುಕ್ರವಾರ ಕಾರ್ಕಳ ನಗರ ಭಾಗದಲ್ಲಿ 30.4 ಮಿ. ಮೀ., ಇರ್ವತ್ತೂರಿನಲ್ಲಿ 22.6 ಮಿ. ಮೀ., ಅಜೆಕಾರು 11.4 ಮಿ. ಮೀ., ಸಾಣೂರು 35.2 ಮಿ. ಮೀ., ಕೆದಿಂಜೆ 2.6 ಮಿ. ಮೀ., ಮುಳಿಕಾರು 16.0 ಮಿ. ಮೀ. ಹಾಗೂ ಕೆರ್ವಾಶೆಯಲ್ಲಿ 18. 2 ಮಿ. ಮೀ. ಪ್ರಮಾಣದಲ್ಲಿ ಮಳೆ ದಾಖಲಾಗಿದೆ.
ಮಳೆ ಹಾನಿ
ನ. 5 ರಂದು ನಿಟ್ಟೆ ಗ್ರಾಮದ ಕೊರತಿ ಎಂಬವರ ಮನೆಗೆ ಸಿಡಿಲು ಬಡಿದು ಅಂದಾಜು 1 ಲಕ್ಷ ರೂ. ನಷ್ಟ ಉಂಟಾಗಿದೆ. ಪಳ್ಳಿ ಗ್ರಾಮದ ವಿಜಯ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಅಂದಾಜು 40 ಸಾ. ರೂ. ನಷ್ಟ ಸಂಭವಿಸಿದೆ. ನ. 6 ರಂದು ನಿಟ್ಟೆಯ ಅಲೆಕಸ್ ನಜರತ್ ಎಂಬವರ ಮನೆಗೆ ಸಿಡಿಲು ಬಡಿದಿದ್ದು ಅಂದಾಜು 50 ಸಾ. ರೂ. ನಷ್ಟ ಉಂಟಾಗಿದೆ. ನ. 9 ರಂದು ಕಾರ್ಕಳ ಗ್ರಾಮದ ಪರನೀರು ಶಾಹಿದ ಅವರ ಮನೆಗೆ ಮರ ಬಿದ್ದು ಅಂದಾಜು 25 ಸಾ. ರೂ. ಹಾನಿ ಸಂಭವಿಸಿದೆ. ಕಾವೇರಡ್ಕ ಸದಾಶಿವ ನಾಯ್ಕ್ ಅವರ ಮನೆಗೆ ಸಿಡಿಲು ಬಡಿದು ಅಂದಾಜು 20 ಸಾವಿರ. ರೂ. ನಷ್ಟ ಉಂಟಾಗಿದೆ. ವಿದ್ಯುತ್ ವಯರ್ ಸಂಪೂರ್ಣ ಸುಟ್ಟು ಕರಕಲಾಗಿದೆ.





















