ರೇಪ್‌, ದರೋಡೆ, ದೊಂಬಿಯಲ್ಲಿ ಮುಸ್ಲಿಮರೇ ನಂಬರ್‌ ಒನ್‌ : ಬದ್ರುದ್ದೀನ್‌ ಅಜ್ಮಲ್‌

ಅಸ್ಸಾಂ ಮುಸ್ಲಿಮ್‌ ಮುಖಂಡನ ಹೇಳಿಕೆಗೆ ಕೆಲವರಿಂದ ವಿರೋಧ

ಗುವಾಹಟಿ: ದರೋಡೆ, ರೇಪ್‌, ಡಕಯಿತಿ, ಲೂಟಿ, ದೊಂಬಿಯಂಥ ಅಪರಾಧ ಕೃತ್ಯಗಳಲ್ಲಿ ದೇಶದಲ್ಲಿ ಮುಸ್ಲಿಮರೇ ನಂಬರ್‌ ಒನ್‌. ಹೀಂಗೆಂದು ನೇರಾನೇರ ಹೇಳಿದವರು ಓರ್ವ ಮುಸ್ಲಿಮ್‌ ಮುಖಂಡ. ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಮುಸ್ಲಿಮರಲ್ಲಿ ಅಪರಾಧ ಪ್ರಮಾಣಗಳು ಹೆಚ್ಚಿವೆ ಎಂದು ಹೇಳಿದ ಅದಕ್ಕೂ ಉದಾಹರಣೆಯನ್ನೂ ಕೊಟ್ಟಿದ್ದಾರೆ.
ಇತ್ತೀಚೆಗೆ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬದ್ರುದ್ದೀನ್‌ ಅಜ್ಮಲ್‌, ನಾವು ದರೋಡೆ, ಡಕಾಯಿತಿ, ಅತ್ಯಾಚಾರ, ಲೂಟಿ, ದೊಂಬಿಯಂಥ ಎಲ್ಲ ಅಪರಾಧಗಳಲ್ಲಿ ನಂ.1 ಆಗಿದ್ದೇವೆ. ಜೈಲಿಗೆ ಹೋಗುವುದರಲ್ಲಿಯೂ ನಾವೇ ನಂ.1 ಎಂದು ಹೇಳಿದ್ದಾರೆ.
ಖಂಡನೆ ವ್ಯಕ್ತವಾದ ಹೊರತಾಗಿಯೂ ಬದ್ರುದ್ದೀನ್‌ ಅಜ್ಮಲ್‌ ತನ್ನ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಬೇಕಾದರೆ ಅಂಕಿಅಂಶ ತೆಗೆದುನೋಡಿ ಎಂದು ಸವಾಲು ಹಾಕಿದ್ದಾರೆ.
ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ, ಶಿಕ್ಷಣದ ಕೊರತೆಯಿಂದ ನಮ್ಮ ಜನ ಈ ರೀತಿಯ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ ಎಂದು ಹೇಳಿ ಕೊಂಡಿದ್ದಾರೆ.
ಅಜ್ಮಲ್ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು ಮುಸ್ಲಿಂ ಸಂಘಟನೆಗಳ ನಾಯಕರು, ಧಾರ್ಮಿಕ ಗುರುಗಳೇ ಬದ್ರುದ್ದೀನ್‌ ಅಜ್ಮಲ್‌ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.









































































































error: Content is protected !!
Scroll to Top