ಪಿಎಂ ಕಿಸಾನ್ ಸಮ್ಮಾನ್ ನಿಧಿ – ನವೆಂಬರ್‌ನಲ್ಲಿ 15ನೇ ಕಂತು ಬಿಡುಗಡೆ

ದೆಹಲಿ : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ. ಜುಲೈ ತಿಂಗಳಲ್ಲಿ 14ನೇ ಕಂತಿನ ಹಣ ಬಿಡುಗಡೆ ಆಗಿತ್ತು. ಪ್ರತಿ ನಾಲ್ಕು ತಿಂಗಳಿಗೆ ಕೇಂದ್ರ ಸರಕಾರ 2,000 ರೂ. ಹಣವನ್ನು ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತದೆ. ಅದರಂತೆ, ನವೆಂಬರ್ ತಿಂಗಳಲ್ಲಿ 15ನೇ ಕಂತಿನ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ ನವೆಂಬರ್ ಕೊನೆಯ ವಾರದಲ್ಲಿ 2,000 ರೂ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡುವ ಸಾಧ್ಯತೆಯಿದೆ.

ಕೇಂದ್ರ ಸರಕಾರ 2019ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಿಸಿತು. ಅದರಂತೆ ವರ್ಷಕ್ಕೆ 3 ಕಂತುಗಳಲ್ಲಿ 2,000 ರೂನಂತೆ ಒಟ್ಟು 6,000 ರೂ ಹಣವನ್ನು ರೈತರಿಗೆ ಒದಗಿಸಲಾಗುತ್ತದೆ. ಜಮೀನು ಮಾಲಕತ್ವ ಹೊಂದಿರುವ ರೈತರು ಈ ಯೋಜನೆಯ ಫಲ ಪಡೆಯಲು ಅರ್ಹರಿರುತ್ತಾರೆ. ಒಂದು ಹಣಕಾಸು ವರ್ಷದಲ್ಲಿ 3 ಕಂತುಗಳಲ್ಲಿ, ಅಂದರೆ ಏಪ್ರಿಲ್​ನಿಂದ ಜುಲೈವರೆಗೆ, ಆಗಸ್ಟ್​ನಿಂದ ನವೆಂಬರ್​ವರೆಗೆ, ಡಿಸೆಂಬರ್​ನಿಂದ ಮಾರ್ಚ್​ವರೆಗಿನ ಅವಧಿಗೆ 2,000 ರೂ ಹಣವನ್ನು ಸರ್ಕಾರ ರೈತರಿಗೆ ನೀಡುತ್ತದೆ. ಸರಕಾರ ಇಲ್ಲಿಯವರೆಗೆ 15 ಕಂತುಗಳಲ್ಲಿ ಒಟ್ಟು 2.5 ಲಕ್ಷಕೋಟಿ ರೂ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಿದೆ.































































































































error: Content is protected !!
Scroll to Top