ಕಾರ್ಕಳ : ಫ್ರೆಂಡ್ಸ್ ಸರ್ಕಲ್ ಕಣಜಾರು ಮುಂಬಯಿಯ 20ನೇ ವಾರ್ಷಿಕೋತ್ಸವದ ಪ್ರಯುಕ್ತ ನಾಲಾಸೋಪಾರ ಪಶ್ಚಿಮದ ಹೊಟೇಲ್ ಗ್ಯಾಲಕ್ಸಿ ಸಭಾಂಗಣದಲ್ಲಿ ಅ. 13 ರಂದು ಕಣಂಜಾರು ಕಲೋತ್ಸವ -2023 ನಡೆಯಲಿದೆ. ಕಣಜಾರು ಮೇಲ್ ಮೂಡುಬೆಟ್ಟು ದಿ. ಸುಂದರಿ ಎಚ್. ಶೆಟ್ಟಿ ವೇದಿಕೆಯಲ್ಲಿ ಅರ್ಥಪೂರ್ಣ ಸಮಾರಂಭ ನಡೆಯಲಿದೆ. ಶಶಿಧರ ಕೆ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿರುವರು.
ಸನ್ಮಾನ
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿಯವರನ್ನು ಅಭಿನಂದಿಸಲಾಗುವುದು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರ ಐಕಳ ಹರೀಶ್ ಶೆಟ್ಟಿಯವರಿಗೆ ಸೇವಾ ಸಾಧಕ ಪುರುಷೋತ್ತಮ ಪ್ರಶಸ್ತಿ ಹಾಗೂ ನಾಲಾಸೋಪಾರ ತುಳುಕೂಟ ಫೌಂಡೇಶನ್ ಅಧ್ಯಕ್ಷ ಶಶಿಧರ್ ಶೆಟ್ಟಿಯವರಿಗೆ ಸೇವಾ ಸಾಧಕ ಕುಲರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು . ಚಲನಚಿತ್ರ ಕ್ಷೇತ್ರದ ಸಾಧನೆಗಾಗಿ ಮಾನಸಿ ಸುಧೀರ್, ಧಾರ್ಮಿಕ ಕ್ಷೇತ್ರದಲ್ಲಿ ಪ್ರದೀಪ್ ಶೆಟ್ಟಿ, ಉದ್ಯಮ ಕ್ಷೇತ್ರದಲ್ಲಿ ನಯನಾ ಆರ್. ಶೆಟ್ಟಿ, ಕಲಾಕ್ಷೇತ್ರದಲ್ಲಿ ಸುಶ್ಮಿತಾ, ಜಗಪ್ಪ ಮತ್ತು ಹಿತೇಶ್ ಕಾಪಿನಡ್ಕ, ತಾಂತ್ರಿಕ ಕ್ಷೇತ್ರದಲ್ಲಿ ಸುರೇಶ್ ಕೊಲ್ಲೂರು, ಸಂಘಟನಾ ಕ್ಷೇತ್ರದಲ್ಲಿ ರಂಜಿತ್ ಶೆಟ್ಟಿ ಕೌಡೂರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಲಾವಣ್ಯ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು.
ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 9 ಗಂಟೆಗೆ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ರಚಿಸಿ, ನಿರ್ದೇಶಿಸಿದ ಕಲಾಸಂಗಮ ಮಂಗಳೂರು ತಂಡದವರಿಂದ ತುಳು ಸಾಂಸಾರಿಕ ನಾಟಕ ಮೈತಿದಿ ಪ್ರದರ್ಶನಗೊಳ್ಳಲಿದೆ ಎಂದು ಫ್ರೆಂಡ್ಸ್ ಸರ್ಕಲ್ ಕಣಜಾರು ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಕಣಜಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

.






















