ಗಣಿತ ನಗರ ಸೌಹಾರ್ದ ಸಹಕಾರಿ ನಿಯಮಿತ – ವಾರ್ಷಿಕ ಮಹಾಸಭೆ

ಶೇ. 15 ಡಿವಿಡೆಂಟ್ ಘೋಷಣೆ

ಕಾರ್ಕಳ : ಗಣಿತ ನಗರ ಸೌಹಾರ್ದ ಸಹಕಾರಿ ನಿ.ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಜ್ಞಾನಸುಧಾ ಕಾಲೇಜು ಆವರಣದಲ್ಲಿ ಶನಿವಾರ ನಡೆಯಿತು. ಸಹಕಾರಿ ನಿಯಮಿತದ ಅಧ್ಯಕ್ಷ ಸಾಹಿತ್ಯ ಮಾತನಾಡಿ, ಸೌಹಾರ್ದ ಸಹಕಾರಿ ಮೂಲಕ ಆರ್ಥಿಕವಾಗಿ ಸದೃಢವಾಗುವುದರೊಂದಿಗೆ ಗ್ರಾಮೀಣಾಭಿವೃದ್ಧಿ ಸಾಧ್ಯವಾಗುವುದು ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೈಲೇಶ್ ಅವರು 2022-23ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮತ್ತು ಆರ್ಥಿಕ ತಃಖ್ತೆಗಳನ್ನು ಮಂಡಿಸಿದರು.
ನಿರ್ದೇಶಕರಾದ ಶಾಂತಿರಾಜ್ ಹೆಗ್ಡೆ, ಅನಿಲ್ ಕುಮಾರ್ ಜೈನ್, ಜ್ಯೋತಿ ಪದ್ಮನಾಭ ಭಂಡಿ, ಸಂತೋಷ್, ಮಂಜುನಾಥ್, ಅರುಣ್ ಕುಮಾರ್, ಉಮೇಶ್ ಶೆಟ್ಟಿ, ಶ್ರೀಕಾಂತ್ ಮತ್ತು ನಿತೇಶ್ ಎಂ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಕಾರಿಯ ಉಪಾಧ್ಯಕ್ಷ ಡಾ. ಸತೀಶ್ ಶೆಟ್ಟಿ ಸ್ವಾಗತಿಸಿ, ನಿರ್ದೇಶಕ ರವಿ ಜಿ. ವಂದಿಸಿದರು. ಶಿಕ್ಷಕ, ಸಾಹಿತಿ, ಸಂತೋಷ್ ನೆಲ್ಲಿಕಾರು ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top