ನಾಗರಹಾವಿಗೆ ಡೀಸೆಲ್‌ ಎರಚಿದ ಕಾರ್ಮಿಕ ಒಂದೇ ವಾರದಲ್ಲಿ ಅಸ್ವಸ್ಥ

ಹಾವಿಗೆ ಆದಂತೆ ಮೈ ಉರಿ ಬಂದು ಆಸ್ಪತ್ರೆಗೆ ದಾಖಲು

ಕಿನ್ನಿಗೋಳಿ: ನಾಗರಹಾವಿನ ಮೇಲೆ ಡೀಸೆಲ್‌ ಎರಚಿದ ವ್ಯಕ್ತಿ ಒಂದೇ ವಾರದಲ್ಲಿ ಅಸ್ವಸ್ಥಗೊಂಡು ನಾಗರಹಾವಿನಂತೆ ಉರಿಯಿಂದ ಒದ್ದಾಡಿ ಆಸ್ಪತ್ರೆಗೆ ದಾಖಲಾಗಿರುವ ವಿಚಿತ್ರ ಘಟನೆಯೊಂದು ಕಿನ್ನಿಗೋಳಿಯಲ್ಲಿ ಸಂಭವಿಸಿದ್ದು, ಸ್ಥಳೀಯರು ಇದು ನಾಗನದ್ದೇ ಶಾಪ ಎನ್ನುತ್ತಿದ್ದಾರೆ.
ಕಿನ್ನಿಗೋಳಿ ಅಪಾರ್ಟ್‌ಮೆಂಟ್‌ ಒಂದರ ಸಮೀಪ ಕಳೆದ ವಾರ ನಾಗರಹಾವು ಕಂಡುಬಂದಿತ್ತು. ಕಟ್ಟಡದ ಕಾವಲುಗಾರ ಈ ನಾಗರಹಾವನ್ನು ಓಡಿಸಲು ಅದರ ಮೇಲೆ ಡೀಸೆಲ್‌ ಎರಚಿದ್ದಾನೆ. ಡೀಸೆಲ್‌ ಉರಿಯಿಂದ ನಾಗರಹಾವು ಒದ್ದಾಡಿತ್ತು.
ಸ್ಥಳೀಯರು ಉರಗ ರಕ್ಷಕ ಯತೀಶ್‌ ಕಟೀಲು ಅವರಿಗೆ ಮಾಹಿತಿ ನೀಡಿದಾಗ ಅವರು ಬಂದು ಹಾವನ್ನು ರಕ್ಷಣೆ ಮಾಡಿ ಶ್ಯಾಂಪೂವಿನಲ್ಲಿ ಹಾವಿನ ಮೈ ತೊಳೆದು ಸಹಜ ಸ್ಥಿತಿಗೆ ತಂದು ಅನಂತರ ಕಾಡಿಗೆ ಬಿಟ್ಟಿದ್ದರು.
ಒಂದು ವಾರ ಕಳೆಯುವಷ್ಟರಲ್ಲಿ ಡೀಸೆಲ್‌ ಎರಚಿದ ಉತ್ತರ ಕರ್ನಾಟಕದ ಕಾರ್ಮಿಕ ಕೂಡ ನಾಗರಹಾವಿನಂತೆ ಮೈ ಉರಿಯಿಂದ ಬಳಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಜನರಲ್ಲಿ ಈ ಘಟನೆ ವಿಸ್ಮಯ ಮೂಡಿಸಿದೆ.































































































































































error: Content is protected !!
Scroll to Top