ಮಂಗಳೂರು : ಮೈದಾನದಲ್ಲಿ ಆಟವಾಡಿ ಮನೆಗೆ ಹೋಗುತ್ತಿದ್ದ ಯುವಕನೋರ್ವನಿಗೆ ಚೂರಿ ಇರಿದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ. 3 ರ ಸಂಜೆ ಸಂಭವಿಸಿದೆ. ಬಜ್ಜೆ ಕಳವಾರು ಶಾಂತಿಗುಡ್ಡೆ ನಿವಾಸಿ ಸಫ್ಘಾನ್ (23) ಚೂರಿ ಇರಿತಕ್ಕೊಳಗಾದ ಯುವಕ.
ಸಫ್ಘಾನ್ ಅವರ ಕತ್ತು, ಕೈಗೆ ಹಾಗೂ ಬೆನ್ನಿಗೆ ಚೂರಿಯಿಂದ ಇರಿಯಲಾಗಿದೆ. ತಕ್ಷಣ ಯುವಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸಫ್ಘಾನ್ ಗೆಳೆಯರೊಂದಿಗೆ ಆಟವಾಡಿ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಸ್ಥಳೀಯರೇ ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.