ಕಾಸರಗೋಡು : ಪೊಲೀಸರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಆದಿತ್ಯವಾಋ ಮುಂಜಾನೆ ಉಪ್ಪಳ ಸಮೀಪದ ಹಿದಾಯತ್ ನಗರದಲ್ಲಿ ನಡೆದಿದೆ. ಹಲ್ಲೆಯ ಪರಿಣಾಮವಾಗಿ ಮಂಜೇಶ್ವರ ಪೊಲೀಸ್ ಠಾಣಾ ಸಬ್ ಇನ್ಸ್ ಪೆಕ್ಟರ್ ಪಿ. ಅನೂಪ್ ಹಾಗೂ ಪೊಲೀಸ್ ಕಿಶೋರ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಉಪ್ಪಳದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಜಾನೆ ಗಸ್ತು ತಿರುಗುತ್ತಿದ್ದಾಗ ಗುಂಪು ಸೇರಿರುವುದನ್ನು ಗಮನಿಸಿದ ಪೊಲೀಸರು ಸ್ಥಳಕ್ಕೆ ತಲಪಿದ್ದು, ಸ್ಥಳದಿಂದ ತೆರಳುವಂತೆ ಸೂಚನೆ ನೀಡಿದರು. ಆದರೆ ತಂಡವು ಪೊಲೀಸರನ್ನು ಲೆಕ್ಕಿಸದೆ ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿದ್ದು, ನಿಯಂತ್ರಿಸಲು ಮುಂದಾದಾಗ ತಂಡ ಪೊಲೀಸರ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಐವರ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಮೇಲೆ ಹಲ್ಲೆ – ಐವರ ವಿರುದ್ಧ ದೂರು ದಾಖಲು
