ಅನ್‌ಲೈನ್‌ ಹೂಡಿಕೆ ಆಮಿಷವೊಡ್ಡಿ 11 ಲ.ರೂ. ವಂಚನೆ

ಮಂಗಳೂರು: ಆನ್‌ಲೈನ್‌ ವಂಚನೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ದಿಢೀರ್‌ ಶ್ರೀಮಂತರಾಗುವ ಹಪಾಹಪಿಯಲ್ಲಿ ಮೋಸ ಹೋಗುವುದು ಕಡಿಮೆಯಾಗುತ್ತಿಲ್ಲ. ಮಂಗಳೂರಿನ ವ್ಯಕ್ತಿಯೊಬ್ಬರು ಮನೆಯಲ್ಲೇ ಕುಳೀತು ನಿತ್ಯ 3,000 ರೂ. ಗಳಿಸುವ ಆಸೆಗೆ ಬಲಿಬಿದ್ದು ಬರೋಬ್ಬರಿ 11 ಲ.ರೂ. ಕಳೆದುಕೊಂಡಿದ್ದಾರೆ.
ಆನ್‌ಲೈನ್‌ನಲ್ಲಿ ಪಾರ್ಟ್‌ಟೈಂ ಉದ್ಯೋಗದ ಆಮಿಷವೊಡ್ಡಿ 10.88 ಲಕ್ಷ ರೂ. ಹೂಡಿಕೆ ಮಾಡಿಸಿ ವಂಚಿಸಿದ ಬಗ್ಗೆ ಮಂಗಳೂರಿನ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಯುಯೇಟ್‌ ಮೀಡಿಯಾ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ ಆ. 26ರಂದು ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿದ್ದ. ಆನ್‌ಲೈನ್‌ನಲ್ಲಿ ಟಾಸ್ಕ್ ಗಳ ಮೂಲಕ ಪ್ರತಿದಿನ 2-3 ಸಾವಿರ ರೂ. ಸಂಪಾದನೆ ಮಾಡಬಹುದು ಎಂದು ಸಂದೇಶದಲ್ಲಿ ತಿಳಿಸಿದ್ದ. ಇದನ್ನು ನಂಬಿ ಹಂತ ಹಂತವಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ.
ಆರಂಭದಲ್ಲಿ 1,000 ರೂ.ಗಳಿಂದ 3,000 ರೂ.ಗಳನ್ನು ತೊಡಗಿಸಿದಾಗ ಅವರ ಖಾತೆಗೆ ಅಷ್ಟೇ ಹಣ ಜಮೆಯಾಗಿತ್ತು. ಆದರೆ ಅನಂತರವೂ ಹಣ ಹೂಡಿಕೆಗೆ ಅಪರಿಚಿತ ಒತ್ತಾಯಿಸಿದ್ದ. ಅದರಂತೆ ದೂರುದಾರರಿಂದ ಹಂತಹಂತವಾಗಿ ಆ.28ರ ವರೆಗೆ ಒಟ್ಟು 10.88 ಲಕ್ಷ ರೂ. ವರ್ಗಾಯಿಸಿಕೊಂಡು ಯಾವುದೇ ಮೊತ್ತ ಮರುಪಾವತಿಸದೆ ವಂಚಿಸಿದ್ದಾನೆ.





























































































































error: Content is protected !!
Scroll to Top