ರೇವ್‌ ಪಾರ್ಟಿ : ಸಿನೆಮಾ ನಿರ್ಮಾಪಕ ಬಂಧನ

ಅಪಾರ ಪ್ರಮಾಣದ ಮಾದಕ ವಸ್ತು ವಶ

ಹೈದರಾಬಾದ್: ಮಾದಕ ದ್ರವ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬುಧವಾರ ಮಧ್ಯರಾತ್ರಿ ಹೈದರಾಬಾದ್​​ನ ಮಾದಾಪುರದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ದಾಳಿ ಮಾಡಿ ಸಿನೆಮಾ ನಿರ್ಮಾಪಕನ ಸಹಿತ ಹಲವು ಮಂದಿಯನ್ನು ಬಂಧಿಸಿ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಸಿನೆಮಾ ನಿರ್ಮಾಪಕ ವೆಂಕಟ್ ಸೇರಿ ಐವರು ಸೆಲೆಬ್ರಿಟಿಗಳನ್ನು ಇಲ್ಲಿ ಸಿಕ್ಕಿಬಿದ್ದಿದ್ದಾರೆ.
ಮಾದಾಪುರದ ವಿಠ್ಠಲ್​ರಾವ್ ನಗರದ ಅಪಾರ್ಟ್​ಮೆಂಟ್​ನಲ್ಲಿ ರೇವ್ ಪಾರ್ಟಿ ನಡೆಯುತ್ತಿರುವ ಖಚಿತ ಮಾಹಿತಿ ಪಡೆದ ಎನ್‌ಸಿಬಿ ಅಧಿಕಾರಿಗಳು ದಾಳಿ ಮಾಡಿದರು. ಈ ವೇಳೆ ಕೊಕೆನ್, ಎಲ್​ಎಸ್​ಡಿ ಸೇರಿ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಎಲ್ಲರನ್ನೂ ಮಾದಾಪುರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಪಾರ್ಟಿಯಲ್ಲಿ ಭಾಗವಹಿಸಿದವರ ಹೆಸರು ಇನ್ನಷ್ಟೇ ಹೊರ ಬೀಳಬೇಕಿದೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಈ ರೇವ್ ಪಾರ್ಟಿಯಲ್ಲಿ ಗಣ್ಯರ ಮಕ್ಕಳು ಭಾಗಿ ಆಗಿರುವ ಶಂಕೆ ಇದೆ.









































































































error: Content is protected !!
Scroll to Top