ಉಜ್ವಲ ಬಳಕೆದಾರರಿಗೆ ರೂ. 400, ಉಳಿದ ಗ್ರಾಹಕರಿಗೆ 200 ರೂಪಾಯಿ LPG ಸಬ್ಸಿಡಿ : ಕೇಂದ್ರ ಸರಕಾರ

ನವದೆಹಲಿ : ಹಲವಾರು ವರ್ಷಗಳ ಹಿಂದೆ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಹಿಂತೆಗೆದುಕೊಂಡಿದ್ದ ಕೇಂದ್ರ ಸರಕಾರ ಇದೀಗ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿಯನ್ನು ಕೊಡಲು ನಿರ್ಧರಿಸಿದೆ. ಕೇಂದ್ರ ಸಚಿವ ಸಂಪುಟ ಪುನಃ ಸಬ್ಸಿಡಿಯನ್ನು ಕೊಡುವ ನಿರ್ಧಾರ ತೆಗೆದುಕೊಂಡಿದ್ದು, ದೇಶದ ಎಲ್ಲಾ 33 ಕೋಟಿ ಎಲ್‌ಪಿಜಿ ಗ್ರಾಹಕರಿಗೆ ಇದು ಅನ್ವಯಿಸುತ್ತದೆ. ಇದರಿಂದ ವಾರ್ಷಿಕ ಒಟ್ಟು ಸುಮಾರು 10,000 ಕೋಟಿ ರೂ. ಆರ್ಥಿಕ ಹೊರೆಯಾಗಲಿದ್ದು ಈ ವರ್ಷದ ಉಳಿಕೆ ಅವಧಿಗೆ 7,680 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಎಲ್ಲಾ ಗ್ರಾಹಕರಿಗೆ 200 ರೂಪಾಯಿಯಷ್ಟು ಇಳಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಇಂದು ಕೇಂದ್ರ ಸಂಪುಟದ ನಿರ್ಧಾರಗಳನ್ನು ವಿವರಿಸಿದರು. ಉಜ್ವಲ ಯೋಜನೆಯಡಿ ಇನ್ನೂ 75 ಲಕ್ಷ ಮಂದಿಗೆ ಉಚಿತ ಅನಿಲ ಸಂಪರ್ಕವನ್ನು ಕಲ್ಪಿಸಿಕೊಡಲಾಗುತ್ತದೆ. ಉಜ್ವಲ ಗ್ರಾಹಕರು ಪ್ರತಿ ಸಿಲಿಂಡರ್‌ಗೆ ಒಟ್ಟು 400 ರೂಪಾಯಿ ಸಬ್ಸಿಡಿ ಪಡೆಯಲಿದ್ದಾರೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಏನಿದು ಪಿಎಂ ಉಜ್ವಲ ಯೋಜನೆ?

ಪ್ರಧಾನಮಂತ್ರಿ ಉಜ್ವಲ ಯೋಜನೆ 2016ರಲ್ಲಿ ಶುರುವಾಗಿದ್ದು, ಬಡತನ ರೇಖೆಯಿಂದ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಎಲ್​ಪಿಜಿ ಕನೆಕ್ಷನ್ ಕೊಡುವ ಉದ್ದೇಶ ಹೊಂದಿದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು ಇದರ ಫಲಾನುಭವಿಗಳಾಗಬಹುದು. 5 ಕೋಟಿ ಎಲ್​ಪಿಜಿ ಸಂಪರ್ಕ ಕೊಡುವ ಗುರಿ ಇಡಲಾಗಿದೆ.







































error: Content is protected !!
Scroll to Top