ಆ. 21 : ಜ್ಞಾನಸುಧಾ ಸಂಸ್ಥಾಪಕರ ದಿನಾಚರಣೆ – ವಿವಿಧ ಸಾಮಾಜಿಕ ಕಾರ್ಯಗಳಿಗೆ ನೆರವು

ಕಾರ್ಕಳ : ಕಾರ್ಕಳ ಗಣಿತನಗರ ಜ್ಞಾನಸುಧಾ ಕಾಲೇಜಿನಲ್ಲಿ ಆ. 21ರಂದು ಸಂಸ್ಥಾಪಕರ ದಿನಾಚರಣೆ ನಡೆಯಲಿದೆ. ಆ ಪ್ರಯುಕ್ತ ಆ. 20ರ ಭಾನುವಾರ ರಕ್ತದಾನ ಶಿಬಿರ ಜರುಗಲಿದೆ. ಬೆಳಿಗ್ಗೆ 9:30ರಿಂದ 1 ಗಂಟೆಯವರೆಗೆ ಶಿಬಿರ ನಡೆಯಲಿದ್ದು ರಕ್ತದಾನ ಮಾಡಲಿಚ್ಚಿಸುವವರು https://forms.gle/79fYb7z2W3zSzJwo7 ಈ ಲಿಂಕ್ ಬಳಸಿ ರಿಜಿಸ್ಟರ್‌ ಮಾಡಿಕೊಳ್ಳಬಹುದಾಗಿದೆ.
ಆ. 21ರ ಸಂಜೆ 3 ಗಂಟೆಗೆ ಸಂಸ್ಥಾಪಕ ದಿನಾಚರಣೆ ಸಭಾ ಕಾರ್ಯಕ್ರಮದಲ್ಲಿ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯ ಡಾ. ಸಂಜಯ್‌ ಕುಮಾರ್‌ ಕೆ. ಆರ್.‌, ರೋಟರಿ ಕ್ಲಬ್ 3182ರ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್‌ ಶೆಟ್ಟಿ ಭಾಗವಹಿಸಲಿರುವರು.
ಈ ಸಂದರ್ಭದಲ್ಲಿ ರಂಗನಪಲ್ಕೆಯ ಹೊಸಬೆಳಕು ಹಾಗೂ ಶಿರ್ವದ ವಿಶ್ವಾಸದ ಮನೆ ಆಶ್ರಮಗಳಿಗೆ ಸಹಾಯಧನ, ಅನಾರೋಗ್ಯದಿಂದ ಬಳಲುತ್ತಿರುವ ಕುಕ್ಕುಂದೂರಿನ ಮೂವರಿಗೆ ಆರ್ಥಿಕ ನೆರವು, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಯವರನ್ನು ಸನ್ಮಾನಿಸಲಾಗುವುದು ಎಂದು ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಪ್ರಕಟನೆಯಲ್ಲಿ ತಿಳಿಸಿದೆ.

































































error: Content is protected !!
Scroll to Top