ದ.ಕ., ಉಡುಪಿಯವರಿಗೆ ಮಂಗಳೂರಿನಲ್ಲಿ ನೇಮಕಾತಿ ಪ್ರಕ್ರಿಯೆ
ಮಂಗಳೂರು : ಸರಕಾರದ ಸಾರಿಗೆ ನಿಗಮದ ಬಸ್‌ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಕಗೊಳಿಸುವ ಪ್ರಕ್ರಿಯೆಗೆ ನಡೆಯುತ್ತಿದೆ. ನೇರ ನೇಮಕ ಪ್ರಕ್ರಿಯೆ ನಡೆಯಲಿದೆ. ದ.ಕ. ಹಾಗೂ ಉಡುಪಿ ಜಿಲ್ಲೆಯ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಆ.22ರಂದು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಇಂದಿರಾ ಗಾಂಧಿ ಜನ್ಮಶತಾಬ್ದಿ ಭವನದ ಕೆಳ ಅಂತಸ್ತಿನಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಬೆಳಗ್ಗೆ 10ರಿಂದ 1ಗಂಟೆಯ ತನಕ ಸಂದರ್ಶನ ನಡೆಯಲಿದೆ.
ಆಧಾರ್ ಕಾರ್ಡ್, ಲೈಸೆನ್ಸ್, 4 ಪಾಸ್ ಪೋರ್ಟ್ ಗಾತ್ರದ ಫೋಟೊ, ವಾಹನ ಚಾಲನಾ ಪರವಾನಗಿ, 7ನೇ ತರಗತಿ ಮೇಲ್ಪಟ್ಟು ತೇರ್ಗಡೆಯಾದ ಅಂಕಪಟ್ಟಿ ಇರಬೇಕು.































