ಕಲ್ಯಾ ಗ್ರಾ. ಪಂ. ಅಧ್ಯಕ್ಷರಾಗಿ ಪೂಜಾ – ಉಪಾಧ್ಯಕ್ಷರಾಗಿ ಹರಿಜೀವನ್‌ ಶೆಟ್ಟಿ

ಕಾರ್ಕಳ : ಕಲ್ಯಾ ಗ್ರಾ. ಪಂ. ಅಧ್ಯಕ್ಷರಾಗಿ ಪೂಜಾ ಹಾಗೂ ಉಪಾಧ್ಯಕ್ಷರಾಗಿ ಹರಿಜೀವನ್‌ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ. 19 ರಂದು ಆಯ್ಕೆ ಪ್ರಕ್ರಿಯೆ ನಡೆದಿದ್ದು, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಸೋಮಶೇಖರ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
10 ಮಂದಿ ಸದಸ್ಯರನ್ನು ಹೊಂದಿರುವ ಕಲ್ಯಾ ಗ್ರಾಮ ಪಂಚಾಯತ್‌ನಲ್ಲಿ ಎಲ್ಲರೂ ಬಿಜೆಪಿ ಬೆಂಬಲಿತರೇ. ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆಗೆ ಒಲಿದಿದ್ದು, ಈ ಸಮುದಾಯದಿಂದ ಪೂಜಾ ಅವರೇ ಏಕೈಕ ಸದಸ್ಯರಾಗಿದ್ದಾರೆ.  ಉಪಾಧ್ಯಕ್ಷ ಸ್ಥಾನ  ಹಿಂದುಳಿದ ವರ್ಗ (ಬಿ) ಕೆಟಗರಿಗೆ ಲಭಿಸಿತ್ತು.

































































error: Content is protected !!
Scroll to Top