ಕಾನೂನು ಕಣಜ – ವಿವಾಹಕ್ಕೆ ಸಂಬಂಧಿಸಿದ ವಿವಿಧ ಅಪರಾಧಗಳು

ಒಬ್ಬ ವಿವಾಹಿತ ಪುರುಷ ಅಥವಾ ಮಹಿಳೆ ತನ್ನ ಜೀವಿತ ಕಾಲದಲ್ಲಿ ತನ್ನ ಸಂಗಾತಿ ಜೀವಂತವಾಗಿರುವ ಸಂದರ್ಭದಲ್ಲಿ ಎರಡನೇ ವಿವಾಹವಾದಲ್ಲಿ ಅದು ಕಾನೂನು ಬಾಹಿರವಾದ ಶಿಕ್ಷಾರ್ಹ ಅಪರಾಧವಾಗಿದ್ದು ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗುವ ವ್ಯಕ್ತಿ ಮತ್ತು ಆತನಿಗೆ ಸಹಕರಿಸಿದ ಹಾಗೂ ಪ್ರಚೋದನೆ ನೀಡಿದ ವ್ಯಕ್ತಿಗಳು ಏಳು ವರ್ಷಗಳವರೆಗಿನ ಜೈಲು ಶಿಕ್ಷೆಗೆ ಮತ್ತು ದಂಡನೆಗೆ ಗುರಿಯಾಗಬೇಕಾಗುತ್ತದೆ. ಆದರೆ ಯಾವುದೆ ಸಕ್ಷಮ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯವು ಅಂತಹ ಗಂಡ ಅಥವಾ ಹೆಂಡತಿಯ ನಡುವಿನ ವಿವಾಹವನ್ನು ಶೂನ್ಯವೆಂದು ಘೋಷಿಸಿರುವ ಸಂದರ್ಭದಲ್ಲಿ ಅಥವಾ ಹಿಂದಿನ ಗಂಡ ಅಥವಾ ಹೆಂಡತಿಯ ಪೈಕಿ ಯಾರೊಬ್ಬರಾದರು ಮದುವೆಯ ಕಾಲದಿಂದ ಸತತವಾಗಿ ಏಳು ವರ್ಷಗಳ ಕಾಲ ಒಬ್ಬರಿಂದ ಇನ್ನೊಬ್ಬರು ಬೇರ್ಪಟ್ಟು ಗೈರು ಹಾಜರಾಗಿದ್ದರೆ ಮತ್ತು ಆ ಕಾಲದೊಳಗೆ ಅಂಥ ವ್ಯಕ್ತಿಯು ಜೀವಂತವಾಗಿರುವ ಬಗ್ಗೆ ಯಾವ ಸುದ್ದಿಯು ತಿಳಿಯದೆ ಹೋದರೆ, ಅಂತಹ ಸಂದರ್ಭದಲ್ಲಿ ನಡೆದ ಮರುವಿವಾಹವು ಶಿಕ್ಷಾರ್ಹ ಅಪರಾದವಾಗುವುದಿಲ್ಲ. ಆದರೆ ಹಾಗೆ ತರುವಾಯದ ಮದುವೆ ಮಾಡಿಕೊಳ್ಳುವ ವ್ಯಕ್ತಿಯು, ಅಂಥ ಮದುವೆಯು ನಡೆಯುವುದಕ್ಕೆ ಮುಂಚೆ, ಯಾರ ಜೊತೆ ತನ್ನ ಮದುವೆ ನಡೆಯುವುದೋ ಆ ವ್ಯಕ್ತಿಗೆ ತನಗೆ ತಿಳಿದಿರುವಷ್ಟು ಮಟ್ಟಿಗೆ ನಿಜಸ್ಥಿತಿಯನ್ನು ತಿಳಿಸುವುದು ಆತನ/ಆತಳ ಕರ್ತವ್ಯವಾಗಿರುತ್ತದೆ.

ವಿಧಿಬದ್ಧವಾಗಿ ತನ್ನನ್ನು ಮದುವೆಯಾಗದಿರುವ ಸ್ತ್ರೀಯನ್ನು ವಿಧಿಬದ್ಧವಾಗಿ ವಿವಾಹವಾಗಿದೆಯೆಂದು ಮೋಸದಿಂದ ನಂಬಿಸಿ ಮತ್ತು ಆ ನಂಬಿಕೆಯಿಂದ ತನ್ನೊಡನೆ ವಾಸಿಸುವಂತೆ ಅಥವಾ ಲೈಂಗಿಕ ಸಂಭೋಗ ಹೊಂದುವಂತೆ ಪ್ರಚೋದಿಸುವ ಯಾವುದೇ ವ್ಯಕ್ತಿಯು, ಹತ್ತು ವರ್ಷಗಳವರೆಗಿನ ಜೈಲು ಶಿಕ್ಷೆಗೆ ಮತ್ತು ದಂಡನೆಗೆ ಗುರಿಯಾಗಬೇಕಾಗುತ್ತದೆ.

ಯಾವ ವ್ಯಕ್ತಿಯೊಂದಿಗೆ ತರುವಾಯದಲ್ಲಿ ತನ್ನ ಮದುವೆಯಾಗುತ್ತದೆಯೋ ಆ ವ್ಯಕ್ತಿಯಿಂದ ತನ್ನ ಹಿಂದಿನ ಮದುವೆಯ ಸಂಗತಿಯನ್ನು ಬಚ್ಚಿಟ್ಟು, ಇ ಹಿಂದಿನ ಪ್ರಕರಣದಲಿ ಪರಿಭಾಷಿಸಿದ ಅಪೃಧವನ್ನು ಮಾಡುವ ವ್ಯಕ್ತಿಯು, ಹತ್ತು ವರ್ಷಗಳವರೆಗಿನ ಕಾರಾವಾಸ ಶಿಕ್ಷೆ ಮತ್ತು ಜುಲ್ಮಾನೆ ಗುರಿಯಾಗುತ್ತಾನೆ

ತಾನು ಮಾಡಿಕೊಳ್ಳುತ್ತಿರುವ ವಿವಾಹವು ವಿಧಿಬದ್ಧವಾದ ವಿವಾಹವಾಗಿರುವುದಿಲ್ಲ ಎಂದು ತಿಳಿದೂ, ಅಪ್ರಾಮಾಣಿಕವಾಗಿ ಅಥವಾ ಮೋಸಮಾಡುವ ದುರುದ್ಧೇಶದಿಂದ ವಿವಾಹವನ್ನು ಮಾಡಿಕೊಳ್ಳುವ ವ್ಯಕ್ತಿಯು ಏಳು ವರ್ಷಗಳವರೆಗಿನ ಜೈಲು ಶಿಕ್ಷೆಗೆ ಮತ್ತು ದಂಡನೆಗೆ ಗುರಿಯಾಗಬೇಕಾಗುತ್ತದೆ.

ಮಹಿಳೆಯ ಗಂಡ ಅಥವಾ ಗಂಡನ ಸಂಬಂಧಿಯಾಗಿರುವ ಯಾವುದೇ ವ್ಯಕ್ತಿಯು ಮಹಿಳೆಯ ಮೇಲೆ ಕ್ರೌರ್ಯ ನಡೆಸಿದರೆ ಆತನು ಮೂರು ವರ್ಷಗಳವರೆಗಿನ ಜೈಲು ಶಿಕ್ಷೆಗೆ ಮತ್ತು ದಂಡನೆಗೆ ಗುರಿಯಾಗಬೇಕಾಗುತ್ತದೆ. ಮಹಿಳೆಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸುವ, ಆಕೆಯ ಪ್ರಾಣಕ್ಕೆ ಅಥವಾ ಆರೋಗ್ಯಕ್ಕೆ ಧಕ್ಕೆ ಉಂಟು ಮಾಡುವ, ಮಾನಸಿಕ ಅಥವಾ ದೈಹಿಕವಾಗಿ ಅಪಾಯ ಉಂಟುಮಾಡುವ ಸಂಭವವಿರುವ ಸ್ವರೂಪದ ಯಾವುದೇ ಉದ್ದೇಶಪೂರ್ವದ ವರ್ತನೆ ಅಂತಹ ಮಹಿಳೆಯ ಗಂಡ ಅಥವಾ ಗಂಡನ ಸಂಬಂಧಿಕರ ಕ್ರೌರ್ಯ ಕೃತ್ಯವೆಂದು ಪರಿಗಣಿಸುವ ಕೃತ್ಯವಾಗಿರುತ್ತದೆ.















































































error: Content is protected !!
Scroll to Top