ಶಿವಪುರ ಗ್ರಾ. ಪಂ. ಅಧ್ಯಕ್ಷರಾಗಿ ಶೋಭಾ, ಉಪಾಧ್ಯಕ್ಷರಾಗಿ ಶಂಕರ ಬಡ್ಕಿಲಾಯ

ಹೆಬ್ರಿ : ಶಿವಪುರ ಗ್ರಾಮ ಪಂಚಾಯತ್‌ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಶೋಭಾ ಬಿ. ಶೆಟ್ಟಿ, ಉಪಾಧ್ಯಕ್ಷರಾಗಿ ಶಂಕರ ಬಡ್ಕಿಲಾಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ. 17 ರಂದು ಆಯ್ಕೆ ಪ್ರಕ್ರಿಯೆ ನಡೆಯಿತು.
13 ಮಂದಿ ಸದಸ್ಯರಿರುವ ಶಿವಪುರ ಪಂಚಾಯತ್‌ನಲ್ಲಿ 8 ಮಂದಿ ಬಿಜೆಪಿ ಬೆಂಬಲಿತ ಹಾಗೂ 5 ಮಂದಿ ಪಕ್ಷೇತರರಾಗಿದ್ದಾರೆ. ಮೀಸಲಾತಿ ನಿಗದಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಕೆಟಗರಿಗೆ ಒಲಿದಿತ್ತು.















































































error: Content is protected !!
Scroll to Top