ಅಕ್ಷಯ್‌ ಕುಮಾರ್‌ಗೆ ಕಪಾಲಮೋಕ್ಷ ಮಾಡಿದರೆ 10 ಲ.ರೂ. ಬಹುಮಾನ

ಓ ಮೈ ಗಾಡ್-2 ಚಿತ್ರದ ವಿರುದ್ಧ ಹಿಂದೂ ಸಂಘಟನೆಗಳ ಕಿಡಿ

ಮುಂಬಯಿ : ಬಾಲಿವುಡ್‌ನ ಖ್ಯಾತ ನಟ ಅಕ್ಷಯ್‌ ಕುಮಾರ್‌ ಕೆನ್ನೆಗೆ ಬಾರಿಸಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಹಿಂದೂ ಸಂಘಟನೆಯೊಂದು ಘೋಷಿಸಿದೆ.
ಇತ್ತೀಚೆಗೆ ಬಿಡುಗಡೆಯಾದ ಓ ಮೈ ಗಾಡ್ 2 (OMG 2) ಚಿತ್ರದ ಶಿವನ ಪಾತ್ರದಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ. ಈ ಪಾತ್ರದ ಶಿವನ ಪಾತ್ರಧಾರಿ ಅಕ್ಷಯ್ ಕುಮಾರ್ ಅವರ ಕೆನ್ನೆಗೆ ಬಾರಿಸುವ ಅಥವಾ ಉಗುಳುವವರಿಗೆ 10 ಲಕ್ಷ ರೂ.ಗಳ ಬಹುಮಾನವನ್ನು ನೀಡುವುದಾಗಿ ರಾಷ್ಟ್ರೀಯ ಹಿಂದೂ ಪರಿಟತ್‌ ಎಂಬ ಸಂಘಟನೆ ಘೋಷಿಸಿದೆ.
ಓ ಮೈ ಗಾಡ್ 2 ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ ರಾಷ್ಟ್ರೀಯ ಹಿಂದೂ ಪರಿಷತ್ ಭಾರತ್ ಗುರುವಾರ ನಟನ ಪ್ರತಿಕೃತಿ ಮತ್ತು ಚಿತ್ರದ ಪೋಸ್ಟರ್ ಗಳನ್ನು ದಹಿಸಿದೆ. ಅಲ್ಲದೆ ಚಿತ್ರಮಂದಿರಗಳ ಮುಂದೆ ಪ್ರದರ್ಶನ ನಿಲ್ಲಿಸಬೇಕು ಎಂದು ಒತ್ತಾಯಿಸಿದೆ.
ಓ ಮೈ ಗಾಡ್-2 ಕೆಲವು ದೃಶ್ಯಗಳಲ್ಲಿ ಶಿವನನ್ನು ಕೀಳಾಗಿ ತೋರಿಸಲಾಗಿದೆ. ಚಿತ್ರದಲ್ಲಿ ಕೊಳಕು ಕೊಳದ ನೀರಿನಲ್ಲಿ ಶಿವ ಸ್ನಾನ ಮಾಡುವ ದೃಶ್ಯವಿದೆ. ಇವು ದೇವರ ಪಾವಿತ್ರ್ಯವನ್ನು ಹಾಳುಮಾಡುತ್ತವೆ. ಹೀಗಾಗಿ ಅಕ್ಷಯ್ ಕುಮಾರ್ ನಟನೆಯ ಓ ಮೈಗಾಡ್ ಸಿನಿಮಾವನ್ನು ಸೆನ್ಸಾರ್ ಮಂಡಳಿ ಮತ್ತು ಕೇಂದ್ರ ಸರ್ಕಾರ ಚಿತ್ರವನ್ನು ನಿಷೇಧಿಸಬೇಕು, ಇಲ್ಲದಿದ್ದರೆ ನಿರಂತರ ಪ್ರತಿಭಟನೆ ನಡೆಸುವುದಾಗಿ ಸಂಘಟನೆಯ ಅಧ್ಯಕ್ಷ ಗೋವಿಂದ್ ಪರಾಶರ್ ಹೇಳಿದ್ದಾರೆ.
ದುರ್ಗಾ ವಾಹಿನಿಯ ಸ್ಥಾಪಕಿ ಸಾಧ್ವಿ ರಿತಂಬರಾ ಅವರು ಓ ಮೈಗಾಡ್-2 ಸಿನಿಮಾವನ್ನು ಟೀಕಿಸಿದ್ದು, ಹಿಂದೂ ಧರ್ಮದ ದಯೆಯೇ ಬಾಲಿವುಡ್ ಅನ್ನು ಮತ್ತೆ ಮತ್ತೆ ಇಂತಹ ಧೈರ್ಯವನ್ನು ಮಾಡಲು ಪ್ರೇರೇಪಿಸುತ್ತದೆ. ಹಿಂದೂ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮದ ಬಗ್ಗೆ ಪ್ರತಿಕ್ರಿಯಿಸಲು ಅವರು ಹೆದರುತ್ತಾರೆ. ಈ ಹಿಂದೆ ಬೆಳ್ಳಿಪರದೆಯ ಮೇಲೆ ಹಿಂದೂ ದೇವರುಗಳು ಮತ್ತು ದೇವತೆಗಳನ್ನು ಅವಮಾನಿಸಲಾಗಿದೆ. ಹಿಂದೂಗಳ ನಂಬಿಕೆಯೊಂದಿಗೆ ಅವರು ಆಟವಾಡಬಾರದು ಎಂದು ಹೇಳಿದ್ದಾರೆ.





































































































































error: Content is protected !!
Scroll to Top