ಕಾಪುವಿನಲ್ಲಿ ತ್ರಿವಳಿ ತಲಾಖ್‌ ಪ್ರಕರಣ ದಾಖಲು

ಹೆಂಡತಿಗೆ ಮಾನಸಿಕ, ದೈಹಿಕ ಹಿಂಸೆ ನೀಡಿ ತಲಾಖ್‌

ಕಾಪು : ತ್ರಿವಳಿ ತಲಾಖ್‌ ನಿಷೇಧಿಸಲ್ಪಟ್ಟಿದ್ದರೂ ಕಾಪುವಿನ ವ್ಯಕ್ತಿಯೊಬ್ಬ ಮೂರು ಸಲ ತಲಾಖ್‌ ಹೇಳಿ ಹೆಂಡತಿಯನ್ನು ಬಿಟ್ಟಿರುವ ಕುರಿತು ಕಾಪು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಪು ಮಲ್ಲಾರು ಕೋಟೆಯ ಮೊಹಮ್ಮದ್‌ ಸಾದಿಕ್‌ ಎಂಬಾತ ಪತ್ನಿ ಅಸ್ಮಾ ಬಾನುಗೆ (37) ನಿರಂತರ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. 2006ರಲ್ಲಿ ಮದುವೆಯಾದಂದಿನಿಂದಲೇ ಹಿಂಸೆ ನೀಡಲು ತೊಡಗಿದ್ದ. ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳಿದಾಗಲೂ ಫೋನ್‌ ಮಾಡಿ ಮಾನಸಿಕ ಕಿರುಕುಳ ಕೊಡುತ್ತಿದ್ದ. ಹೆಂಡತಿಯನ್ನು ತವರು ಮನೆಗೆ ಹೋಗಲು ಬಿಡುತ್ತಿರಲಿಲ್ಲ. ವಿದೇಶದ ಉದ್ಯೋಗ ಹೋದ ಬಳಿಕ ವಾಪಸು ಬಂದ ಸಾದಿಕ್‌ ಪತ್ನಿಯ 22 ಪವನ್‌ ಚಿನ್ನ ಅಡವಿಟ್ಟು ವ್ಯಾಪಾರ ಪ್ರಾರಂಭಿಸಿದ್ದ. ಅದನ್ನು ವಾಪಸು ಕೇಳಿದಾಗ ತಲಾಖ್‌ ನೀಡುವುದಾಗಿ ಬೆದರಿಸುತ್ತಿದ್ದ. ಬುಧವಾರ ರಾತ್ರಿ ಇದೇ ರಿತಿ ಕಿರುಕುಳ ನೀಡಿ ನಾನು ಬೇರೆ ಮದುವೆಯಾಗುತ್ತೇನೆ, ನೀನು ಮನೆಬಿಟ್ಟು ಹೋಗು ಎಂದು ಹೇಳಿ ಮೂರು ಸಲ ತಲಾಖ್‌ ಹೇಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.



















































































error: Content is protected !!
Scroll to Top