ಸುವರ್ಣರ ಹೃದಯ ಶ್ರೀಮಂತಿಕೆ ಎಲ್ಲರಿಗೂ ಆದರ್ಶ – ನಿತ್ಯಾನಂದ ಪೈ
ಕಾರ್ಕಳ : ಚಂದ್ರಹಾಸ ಸುವರ್ಣ ಅವರ ವ್ಯಕ್ತಿತ್ವ ಎಲ್ಲರಿಗೂ ಸ್ಪೂರ್ತಿದಾಯಕ. ಅವರು ಸಮಾಜದೊಂದಿಗೆ ಹೊಂದಿದ್ದ ಒಡನಾಟ ಮತ್ತು ಅವರ ಹೃದಯ ಶ್ರೀಮಂತಿಕೆ ಸರ್ವರಿಗೂ ಆದರ್ಶಪ್ರಾಯವಾದುದು ಎಂದು ಉದ್ಯಮಿ ನಿತ್ಯಾನಂದ ಪೈ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಆ. 1 ರಂದು ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ವತಿಯಿಂದ ಕ್ಲಬ್ನ ವಿಸ್ತರಣಾಧಿಕಾರಿ ಚಂದ್ರಹಾಸ ಸುವರ್ಣ ಅವರ ಶೃದ್ಧಾಂಜಲಿ ಸಭೆಯನ್ನುದ್ಧೇಶಿಸಿ ಸುವರ್ಣರವರೊಂದಿಗಿನ ಒಡನಾಟದ ಕುರಿತು ಮಾತನಾಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷೆ ಜ್ಯೋತಿ ರಮೇಶ್ ಮಾತನಾಡಿ, ಚಂದ್ರಹಾಸ ಸುವರ್ಣ ಅವರು ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದಿದ್ದರೂ, ಅವರ ಜ್ಞಾನ ಭಂಡಾರ ಅಗಾಧ. ಅವರು ಓರ್ವ ಉತ್ತಮ ಕಲಾಪೋಷಕ, ಉತ್ತಮ ಮಾತುಗಾರ, ಅದ್ಭುತ ಸಂಘಟಕ ಮತ್ತು ಯಶಸ್ವಿ ಉದ್ಯಮಿ. ಅವರ ಜೀವನ ಎಲ್ಲರಿಗೂ ಪ್ರೇರಣಾದಾಯಕ. ಎಲ್ಲರನ್ನೂ ಜೊತೆಗೂಡಿಸಿಕೊಂಡು ಸಾಗಿದಾಗ ಯಶಸ್ಸು ಲಭಿಸುತ್ತದೆ ಎಂದು ಜೀವಿಸಿದ ಸುವರ್ಣರು ಶಿರಡಿ ಸಾಯಿ ಮಂದಿರ ಮತ್ತು ಶಿರಡಿ ಕಾಲೇಜು ಹಾಗೂ ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ ಮೂಲಕ ಕಾರ್ಕಳಕ್ಕೆ ಹೊಸ ಪ್ರಭಾವಳಿ ನೀಡಿದ್ದಾರೆ. ಅವರ ನೆನಪು ಎಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ ಎಂದರು.

ಗಂಗಾಧರ ಪಣಿಯೂರು ಮಾತನಾಡಿ, ಕ್ಲಬ್ನಲ್ಲಿ ಚಂದ್ರಹಾಸ ಸುವರ್ಣ ಅವರು ಕೈಗೊಂಡಿದ್ದ ಕಾರ್ಯಚಟುವಟಿಕೆಗಳನ್ನು ಸ್ಮರಿಸಿದರು. ಕ್ಲಬ್ನ ಕಾರ್ಯದರ್ಶಿ ಮಂಜುನಾಥ ರಾವ್, ಕೋಶಾಧಿಕಾರಿ ವಿಜೇಶ್ ಶೆಟ್ಟಿ, ಬಿಓಡಿ ಸದಸ್ಯರಾದ ಟಿ. ಕೆ. ರಘುವೀರ್ ಮತ್ತು ಗೋಪಾಲ್ ಅಂಚನ್ ಉಪಸ್ಥಿತರಿದ್ದರು.






























































