ಆನ್‌ಲೈನ್‌ ವ್ಯವಹಾರದಲ್ಲಿ 24 ಲ.ರೂ. ವಂಚನೆ

ಉಡುಪಿ : ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ ಎನ್ನುವುದು ಆನ್‌ಲೈನ್‌ ವಂಚನೆ ಪ್ರಕರಣಗಳಲ್ಲಿ ಆಗಾಗ ಸಾಬೀತಾಗುತ್ತಿರುತ್ತದೆ. ಸಾಲಿಗ್ರಾಮದ ಕಾರ್ಕಡದ ವ್ಯಕ್ತಿಯೊಬ್ಬರು ಆನ್‌ಲೈನ್‌ ವಹಿವಾಟಿನಲ್ಲಿ ಭಾರಿ ಲಾಭ ಗಳಿಸುವ ಅಶೆಗೆ ಬಿದ್ದು ಬರೋಬ್ಬರಿ 24 ಲ.ರೂ. ಕಳೆದುಕೊಂಡಿದ್ದಾರೆ.
ಪಡುಹೊಳಿಯ ಎಂ. ಎನ್‌. ರಾಜು(44) ವಂಚನೆಗೊಳಗಾದವರು. ಟೆಲಿಗ್ರಾಮ್‌ appಗೆ ರಾಘವೇಂದ್ರ ಎಂಬ ವ್ಯಕ್ತಿ ಮೇಕ್‌ ಮೈ ಟ್ರಿಪ್‌ ಸಂದೇಶ ಕಳುಹಿಸಿದ್ದು, ಆಸಕ್ತಿ ಇದ್ದರೆ ಭಾಗವಹಿಸಬಹುದು ಎಂದು ಹೇಳಿದ್ದ. ರಾಜುಗೆ ಆನ್‌ಲೈನ್‌ನಲ್ಲಿ ಹಣ ಮಾಡಬೇಕೆಂಬ ಆಸಕ್ತಿಯಿತ್ತು. ರಾಘವೇಂದ್ರ ಹೇಳಿದಂತೆ ರಾಜು ಹಂತ ಹಂತವಾಗಿ ಹಣ ಪಾವತಿಸುತ್ತಾ ಹೋಗಿದ್ದಾರೆ. ಕೊನೆಗೆ 16 ಲ.ರೂ. ಒಂದೇ ಕಂತಿನಲ್ಲಿ ಪಾವತಿಸಬೇಕು, ಇಲ್ಲದಿದ್ದರೆ ಇಷ್ಟರ ತನಕ ಪಾವತಿಸಿದ ಹಣ ವಾಪಸು ಸಿಗುವುದಿಲ್ಲ ಎಂದು ಆ ವ್ಯಕ್ತಿ ಹೇಳಿದ್ದಾನೆ. ಇದರಿಂದ ಅನುಮಾನಗೊಂಡು ರಾಜ ವ್ಯವಹಾರ ನಿಲ್ಲಿಸಿದ್ದಾರೆ. ಆದರೆ ಅಷ್ಟರಲ್ಲೇ ಅವರು 23,71,456 ರೂ. ಕಳೆದುಕೊಂಡಿದ್ದರು. ಈ ಕುರಿತು ಕೋಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.





























































































































error: Content is protected !!
Scroll to Top