ಆಷಾಢ ಏಕಾದಶಿ : ಬಾಳಾಗಾರು ಶ್ರೀಪಾದರಿಂದ ತಪ್ತ ಮುದ್ರಾಧಾರಣೆ

ಹೆಬ್ರಿ : ಶರೀರವನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಮುದ್ರಾಧಾರಣೆ. ಮುದ್ರಾಧಾರಣೆಯ ಮೂಲಕ ದೇಹದ ನರಕೋಶ ವ್ಯವಸ್ಥೆ ಸುಲಲಿತವಾಗುತ್ತದೆ. ಇಂದಿಗೂ ಕೆಲ ಗ್ರಾಮೀಣ ಭಾಗಗಳಲ್ಲಿ ಕಾಮಾಲೆ ಪೀಡಿತ ರೋಗಿಗಳಿಗೆ ಕಾದ ಕಂಚಿನ ಸರಳಿನಿಂದ ಬರೆ ಹಾಕುವ ಪದ್ಧತಿಯಿದೆ. ಇದರಿಂದಾಗಿ ದೇಹದೊಳಗಿನ ಬ್ಯಾಕ್ಟೀರಿಯಾ ನಾಶವಾಗುತ್ತದೆ ಎಂದು ಬಾಳಾಗಾರು ಮಠಾಧೀಶರಾದ ಶ್ರೀ ರಘುಭೂಷಣ ತೀರ್ಥ ಶ್ರೀ ಪಾದಂಗಳವರು ಶುಭಸಂಶನೆಗೈದರು.

ಅವರು ಜೂ. 29 ರಂದು ಪ್ರಥಮೈಕಾದಶೀ ಪ್ರಯುಕ್ತ ವಿದ್ವಾನ್ ಶ್ರೀ ರಾಘವೇಂದ್ರ ಭಟ್ ಅವರ ನೇತೃತ್ವದಲ್ಲಿ ಅಜೆಕಾರು ಗುಡ್ಡೆಯಂಗಡಿ ಶ್ರೀ ಹರಿವಾಯು ಕೃಪಾದಲ್ಲಿ ನಡೆದ ತಪ್ತ ಮುದ್ರಾಧಾರಣೆ ಕಾರ್ಯಕ್ರಮದಲ್ಲಿ ಮುದ್ರಾಧಾರಣೆ ನಡೆಸಿ ಆಶಿರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಹೆಬ್ರಿ ಹಾಗೂ ಕಾರ್ಕಳ ತಾಲೂಕಿನ ಅನೇಕ ವಿಪ್ರ ಬಾಂಧವರು ಪಾಲ್ಗೊಂಡಿದ್ದರು.























































error: Content is protected !!
Scroll to Top