ಕಾರ್ಕಳ ಆಸ್ಪತ್ರೆಯಲ್ಲಿ ಅನಧಿಕೃತ ಸಭೆ – ಕಾರಣ ಕೇಳಿ ನೋಟಿಸ್

24 ಗಂಟೆಯೊಳಗೆ ಉತ್ತರಿಸುವಂತೆ ಆಸ್ಪತ್ರೆ ಆಡಳಿತಾಧಿಕಾರಿಗೆ ಡಿಹೆಚ್ಒ ಪತ್ರ

ಕಾರ್ಕಳ : ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಜೂ. 20ರಂದು ಸಭೆ ನಡೆಸಿರುವ ಹಿನ್ನೆಲೆಯಲ್ಲಿ ಡಿಎಚ್ಒ ಅವರು ಕಾರಣ ಕೇಳಿ ಆಸ್ಪತ್ರೆ ಆಡಳಿತಾಧಿಕಾರಿಗೆ ನೋಟಿಸ್ ನೀಡಿರುತ್ತಾರೆ. ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಅನಧಿಕೃತವಾಗಿ ಸಭೆ ನಡೆಸಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಯಾವ ಉದ್ದೇಶದಿಂದ, ಯಾವ ನಿಯಮಾನುಸಾರವಾಗಿ ಸಭೆ ನಡೆಸಿರುತ್ತಿರಿ ಎಂಬುದರ ಬಗ್ಗೆ ವಿವರಣೆ ನೀಡುವಂತೆ, ಹಾಜರಾದ ಸಿಬ್ಬಂದಿ, ಚರ್ಚಿಸಿದ ವಿಷಯಗಳನ್ನು ತಿಳಿಸಬೇಕು. ಈ ಎಲ್ಲ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರ ತಲುಪಿದ 24 ಗಂಟೆಯೊಳಗೆ ಉತ್ತರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ‌ ಕಲ್ಯಾಣಧಿಕಾರಿ ಡಾ. ನಾಗಭೂಷಣ ಉಡುಪ ಅವರು ನೋಟಿಸ್ ನಲ್ಲಿ ತಿಳಿಸಿರುತ್ತಾರೆ. ಸಭೆ ನಡೆದ ದಿನವೇ ನೋಟಿಸ್ ನೀಡಲಾಗಿದ್ದು ಇದೀಗ ಬೆಳಕಿಗೆ ಬಂದಿದೆ.

















































error: Content is protected !!
Scroll to Top