ಕಾರವಾರ : ಕಾಳಿ ನದಿಗೆ ಮಗ, ಪತ್ನಿ ಹಾರಿ ಆತ್ಮಹತ್ಯೆ : ವಿಷಯ ತಿಳಿದ ಬಳಿಕ ನೇಣು ಬಿಗಿದುಕೊಂಡು ಉದ್ಯಮಿ ಆತ್ಮಹತ್ಯೆ

ಕಾರವಾರ : ಕಾರವಾರ ತಾಲೂಕಿನ ಗೋಪಶಿಟ್ಟಾ ಮೂಲದ ಉದ್ಯಮಿ ಶ್ಯಾಮ್ ಪಾಟೀಲ್ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ. ಶ್ಯಾಮ್ ಪಾಟೀಲ್ (40) ಗೋವಾದ ವೆರ್ಣಾ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮ ನಡೆಸುತ್ತಿದ್ದು, ಕಳೆದ ರಾತ್ರಿ ಕೋಡಿಬಾಗದಲ್ಲಿರುವ ಕಾಳಿ ನದಿಗೆ ಪತ್ನಿ ಜ್ಯೋತಿ ಪಾಟೀಲ್ (37), ಮಗ ಧಕ್ಷ್ ಪಾಟೀಲ್(12) ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿದ ನಂತರ ಶ್ಯಾಮ್ ಪಾಟೀಲ್ ಅಲ್ಲಿಂದ 60 ಕಿ.ಮೀ ದೂರದಲ್ಲಿರುವ ಗೋವಾದ ಪಾಟಿ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ತಾಯಿ ಮತ್ತು ಮಗನ ಮೃತದೇಹ ದೇವಬಾಗ ಕಡಲತೀರದಲ್ಲಿ ಪತ್ತೆಯಾಗಿದ್ದರೆ ಶ್ಯಾಮ್ ಮೃತದೇಹ ಪಾಟಿ ಅರಣ್ಯ ಪ್ರದೇಶದಲ್ಲಿ ಸಿಕ್ಕಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಚಿತ್ತಾಕುಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.























































error: Content is protected !!
Scroll to Top