ಪೊಲೀಸರ ದೈಹಿಕ ಕ್ಷಮತೆಗಾಗಿ ಕಾರ್ಕಳದಲ್ಲಿ ಶಟ್ಲ್‌ ಕೋರ್ಟ್‌ ನಿರ್ಮಾಣ

ಕ್ರೀಡಾಂಗಣ ನಿರ್ಮಿಸಿ ವರ್ಗಾವಣೆ ಹೊಂದಿದ ಪ್ರಸನ್ನ ಎಂ.ಎಸ್.‌

ಕಾರ್ಕಳ : ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ. ಕ್ರೀಡೆಯಿಂದ ಒತ್ತಡ ನಿವಾರಣೆಯಾಗಿ ನವೋಲ್ಲಾಸ ತುಂಬುವುದು. ಹೀಗಾಗಿ ಕಾರ್ಕಳ ನಗರ ಪೊಲೀಸ್‌ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್.‌ ಅವರು ಪೊಲೀಸ್‌ ವಸತಿ ಗೃಹದ ಬಳಿ ದಾನಿಗಳ ನೆರವಿನೊಂದಿಗೆ ಪೊಲೀಸರಿಗಾಗಿ ಎರಡು ಶಟ್ಲ್‌ ಕೋರ್ಟ್‌ ನಿರ್ಮಾಣ ಮಾಡಿರುತ್ತಾರೆ.

ಸುಸಜ್ಜಿತ ಕ್ರೀಡಾಂಗಣ

52 ಅಡಿ ಅಗಲ ಮತ್ತು 65 ಅಡಿ ಉದ್ದದೊಂದಿಗೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಕ್ರೀಡಾಂಗಣವನ್ನು ಪೊಲೀಸ್‌ ಸಿಬ್ಬಂದಿ ಮಾತ್ರವಲ್ಲದೆ ಅವರ ಕುಟುಂಬದವರೂ ಬಳಸಬಹುದಾಗಿದೆ.

ಬಂಟ್ವಾಳದಲ್ಲೂ ನಿರ್ಮಿಸಿದ್ದರು

ಪ್ರಸನ್ನ ಅವರು ಈ ಹಿಂದೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಅಲ್ಲೊಂದು ಶಟ್ಲ್‌ ಕೋರ್ಟ್‌ ನಿರ್ಮಿಸಿದ್ದರು. ಕಾರ್ಕಳದಲ್ಲಿ ಶಟ್ಲ್‌ ಕೋರ್ಟ್‌ ನಿರ್ಮಿಸುವಲ್ಲಿ ಇಚ್ಚಾಶಕ್ತಿ ತೋರಿರುವ ಪ್ರಸನ್ನರು ಕಾಮಗಾರಿ ಪೂರ್ತಿಯಾಗುತ್ತಿದ್ದಂತೆ ಇದೀಗ ಪಡುಬಿದ್ರೆ ಪೊಲೀಸ್‌ ಠಾಣೆಗೆ ವರ್ಗಾವಣೆ ಹೊಂದಿರುತ್ತಾರೆ. ಸೋಮವಾರ ಪಡುಬಿದ್ರೆ ಪೊಲೀಸ್‌ ಠಾಣೆ ಎಸ್‌ಐ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಪೊಲೀಸರು ಒತ್ತಡ ಕಡಿಮೆ ಮಾಡಿಕೊಂಡು ಉಲ್ಲಾಸ, ಲವಲವಿಕೆಯಿಂದ ಇರುವಂತೆ ಮಾಡಬೇಕೆಂಬ ನಿಟ್ಟಿನಲ್ಲಿ ದಾನಿಗಳ, ಎಲ್ಲ ಸಿಬ್ಬಂದಿ ಸಹಕಾರದೊಂದಿಗೆ ಶಟ್ಲ್‌ ಕೋರ್ಟ್‌ ನಿರ್ಮಾಣ ಮಾಡಲಾಗಿದೆ. ಇದರಿಂದ ಪೊಲೀಸರು ದೈಹಿಕ ಕ್ಷಮತೆ ಹೊಂದಲು ಸಾಧ್ಯವಾಗುವುದು.
ಪ್ರಸನ್ನ ಎಂ.ಎಸ್.‌

















































error: Content is protected !!
Scroll to Top