ಅಪ್ಪ ಚಾಕೋಲೆಟ್‌ಗೆ ಹಣ ಕೊಡಲಿಲ್ಲ ಎಂಬ ಸಿಟ್ಟಿನಲ್ಲಿ ಮನೆ ಬಿಟ್ಟು ಹೋದ ಸೋದರಿಯರು
ಬೆಂಗಳೂರು: ಅಪ್ಪ ಚಾಕೋಲೆಟ್‌ಗೆ ಹಣ ಕೊಡಲಿಲ್ಲ ಎಂದು ಇಬ್ಬರು ಹೆಣ್ಣು ಮಕ್ಕಳು ಫ್ರೀ ಬಸ್ ಹತ್ತಿ ನೇರವಾಗಿ ಧರ್ಮಸ್ಥಳದಲ್ಲಿ ಬಂದಿಳಿದ ಘಟನೆ ನಡೆದಿದೆ.
ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಚಿತ ಬಸ್ ಸೇವೆ ಯೋಜನೆ ಪೋಷಕರಿಗೆ ಸಂಕಷ್ಟ ತಂದಿತ್ತು. ತಂದೆ ಚಾಕಲೇಟ್ಗೆ ಹಣ ಕೊಡದಿದ್ದಕ್ಕೆ 10 ಮತ್ತು 9 ನೇ ತರಗತಿ ಓದುತ್ತಿದ್ದ ಇಬ್ಬರು ಪುತ್ರಿಯರು ಶುಕ್ರವಾರ ಮನೆ ಬಿಟ್ಟು ಹೋಗಿದ್ದಾರೆ. ಮಕ್ಕಳು ಕಾಣುತ್ತಿಲ್ಲ ಎಂದು ಪೋಷಕರು ಗಾಬರಿಯಾಗಿದ್ದಾರೆ. ತಂದೆ-ತಾಯಿ ಮೇಲಿನ ಕೋಪಕ್ಕೆ ಈ ಹೆಣ್ಣು ಮಕ್ಕಳು ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ್ದಾರೆ.
ಪೋಷಕರು ಭಯಭೀತರಾಗಿ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸಹೋದರಿಯರ ಹುಡುಕಾಟ ನಡೆಸಿದ ಪೊಲೀಸರು, ಮಕ್ಕಳು ನಾಪತ್ತೆಯಾದ ಎರಡು ದಿನದ ಬಳಿಕ ಅಂದ್ರೆ ಜೂನ್ 18 ರಂದು ಧರ್ಮಸ್ಥಳದಲ್ಲಿ ಪತ್ತೆ ಹಚ್ಚಿದ್ದಾರೆ.
























