ತಂದೆ ಪರೀಕ್ಷೆಗೆ ಓದು ಎಂದು ಹೇಳಿದ ಸಿಟ್ಟಿನಲ್ಲಿ ಸಾವಿಗೆ ಶರಣು
ಮೂಡುಬಿದಿರೆ: ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ಕಲಿಯುತ್ತಿದ್ದ ವಿದ್ಯಾರ್ಥಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸಂಭವಿಸಿದೆ.
ಮೂಡುಬಿದಿರೆ ಕಾಲೇಜಿನ ಪಾಲಿಟೆಕ್ನಿಕ್‌ನ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಮೂಡುಬಿದಿರೆ ಸಮೀಪದ ಅಲಂಗಾರಿನ ಸುರೇಶ್ ಭಂಡಾರಿ ಅವರ ಪುತ್ರ, ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾತ್ವಿಕ್ ಭಂಡಾರಿ (20) ಆತ್ಮಹತ್ಯೆ ಮಾಡಿಕೊಂಡಾತ. ಮಗನನ್ನು ಹೆತ್ತವರು ಎಬ್ಬಿಸಿ, ಪರೀಕ್ಷೆ ಹತ್ತಿರ ಬಂದಿದೆ, ಬೇಗ ಎದ್ದು ಓದು ಎಂದು ಬುದ್ಧಿ ಮಾತು ಹೇಳಿದ್ದಾರೆ. ಇದರಿಂದ ಕೋಪಗೊಂಡ ಸಾತ್ವಿಕ್ ಕೋಣೆಯ ಬಾಗಿಲು ಮುಚ್ಚಿ ಶಾಲನ್ನು ಫ್ಯಾನಿಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























