ಕಾರ್ಕಳ : ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಚುನಾವಣೆ ಜೂ. 15 ರಂದು ಜರುಗಿತು. ವಿದ್ಯಾರ್ಥಿಗಳಲ್ಲಿ ಮತದಾನ ಜಾಗೃತಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವತೆಯನ್ನು ತಿಳಿಸುವ ನಿಟ್ಟಿನಲ್ಲಿ ಇವಿಎಂ ಮತಯಂತ್ರದ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಯಿತು.
ನಾಲ್ಕು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು, ನಾಯಕಿಯಾಗಿ ಹತ್ತನೇ ತರಗತಿಯ ಲಹರಿ ಪ್ರಕಾಶ್ ಮತ್ತು ವಿರೊಧ ಪಕ್ಷದ ನಾಯಕಿಯಾಗಿ ಆದಿತ್ಯ ಗುರುನಾಥ ಪ್ರಭು ಆಯ್ಕೆಯಾದರು. ಚುನಾವಣಾ ಅಧಿಕಾರಿಗಳಾಗಿ ವಿದ್ಯಾರ್ಥಿಗಳಾದ ಅದಿತಿ ದೇವಾಡಿಗ, ಸ್ನೇಹಾ ಪದ್ಮಶಾಲಿ, ಸನ್ನಿಧಿ, ಅನವ್ ಮತ್ತು ಪೊಲೀಸ್ ಸಿಬ್ಬಂದಿಯಾಗಿ ಪ್ರಣೀತ್ ಹಾಗೂ ಕೃತನ್ ಚುನಾವಣಾ ಕರ್ತವ್ಯ ಸಲ್ಲಿಸಿದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ವೇದಾವತಿ ಹಾಗೂ ಸಹಶಿಕ್ಷಕರು ಸಹಕರಿಸಿದರು.








































