ನಲ್ಲೂರು ಪರಪ್ಪಾಡಿ ಶಾಲೆಗೆ ರೋಟರಿ ಕ್ಲಬ್‌ ವತಿಯಿಂದ ಪ್ರಿಂಟರ್ ಹಸ್ತಾಂತರ

ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ಇವರು ಜಿಲ್ಲಾ ಯೋಜನೆ ವತಿಯಿಂದ ನಲ್ಲೂರು ಪರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜೂ. 15 ರಂದು ಪ್ರಿಂಟರ್ ಹಸ್ತಾಂತರಿಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶ್ರೇಯಾಂಸ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಸದಸ್ಯರಾದ ವಸಂತ್ ಎಂ., ಇಕ್ಬಾಲ್ ಅಹಮದ್, ಬಾಲಕೃಷ್ಣ ದೇವಾಡಿಗ, ಪ್ರಮೋದ್ ಶೆಟ್ಟಿ, ಶಾಲಾ ಶಿಕ್ಷಕರು ಹಾಗೂ ಪೋಷಕರು ಈ ಸಂದರ್ಭ ಉಪಸ್ಥಿತರಿದ್ದರು. ಶಿಕ್ಷಕಿ ಕಾವ್ಯ ಶೆಟ್ಟಿ ಸ್ವಾಗತಿಸಿ, ನಿವೃತ್ತ ಮುಖ್ಯ ಶಿಕ್ಷಕಿ ಪೂರ್ಣಿಮಾ ಶಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕಾದಂಬರಿ ವಂದಿಸಿದರು.













































































error: Content is protected !!
Scroll to Top