ಕಾರ್ಕಳ : ಕೆರ್ವಾಶೆ ಮೈನ್ ಸ. ಹಿ. ಪ್ರಾ. ಶಾಲೆಯ ಬಾಲವನ ಅಭಿವೃದ್ಧಿಗೆ ಬಾಳಿಗ ಕುಟುಂಬಸ್ಥರಾದ ಪ್ರಭಾವತಿ ಮತ್ತು ವಿಶ್ವನಾಥ ಶೆಣೈ ದಂಪತಿ 1. 7 ಲ. ರೂ. ದೇಣಿಗೆಯನ್ನು ಜೂ. 6 ರಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ವತ್ಥನಾರಾಯಣ ಕಾಮತ್ ಹಾಗೂ ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ್ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ವಿನಾಯಕ ಬಾಳಿಗ, ಪ್ರಶಾಂತ ಕಾಮತ್, ರಮೇಶ್ ಪ್ರಭು, ಗೀತಾ ಬಾಳಿಗ, ಶಾಲಾ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀಹರಿ ಭಟ್, ಸುಬ್ರಾಯ ಭಟ್, ರೋಹಿಣಿ ಪ್ರಭು, ಸುಗಂಧಿ ಶೆಟ್ಟಿ, ದಯಾನಂದ ಶೆಟ್ಟಿ, ಗ್ರಾ. ಪಂ. ಸದಸ್ಯ ಸುನಿಲ್ ಶೆಟ್ಟಿ, ಅಧ್ಯಾಪಕ ವೃಂದ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಕೆರ್ವಾಶೆ ಮೈನ್ ಶಾಲೆಗೆ ಪ್ರಭಾವತಿ ವಿಶ್ವನಾಥ ಶೆಣೈ ದಂಪತಿಯಿಂದ 1. 7 ಲ. ರೂ. ದೇಣಿಗೆ



































