ಕಾರ್ಕಳ : ಜೋಕಾಲಿಯಲ್ಲಿ ಆಟ ಆಡುವಾಗ ಆಕಸ್ಮಿಕವಾಗಿ ಜೋಕಾಲಿಗೆ ಕಟ್ಟಿದ ಸೀರೆ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮವಾಗಿ ಬಾಲಕಿ ಮೃತಪಟ್ಟ ಘಟನೆ ನಿಟ್ಟೆ ಗ್ರಾಮದ ಕೆಮ್ಮಣ್ಣುವಿನಲ್ಲಿ ಮೇ 26 ರಂದು ಸಂಭವಿಸಿದೆ. ಅಂತೊಟ್ಟು ಲಕ್ಷ್ಮಣ್ ಪೂಜಾರಿಯವರ ಮಗಳು ಮಾನ್ವಿ (9 ) ಮೃತಪಟ್ಟ ಬಾಲಕಿ. ಮನೆ ಬಳಿಯಿರುವ ಸಂಬಂಧಿಕರ ಮನೆಯಲ್ಲಿ ನೆರೆಕೆರೆಯ ಮಕ್ಕಳೊಂದಿಗೆ ಜೋಕಾಲಿಯಲ್ಲಿ ಆಡುತ್ತಿದ್ದ ಸಂದರ್ಭ ಸೀರೆ ಕುತ್ತಿಗೆಗೆ ಸುತ್ತಿಕೊಂಡ ಘಟನೆ ನಡೆದಿದೆ. ಚಿಕಿತ್ಸೆಗಾಗಿ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಜೋಕಾಲಿಗೆ ಕಟ್ಟಿದ ಸೀರೆ ಆಕಸ್ಮಿಕವಾಗಿ ಕುತ್ತಿಗೆಗೆ ಸುತ್ತಿ ಬಾಲಕಿ ಸಾವು



































