ಇಂದೋರ್‌ನಲ್ಲೂ ಮುಸ್ಲಿಮರಿಂದ ನೈತಿಕ ಪೊಲೀಸ್‌ಗಿರಿ : ಇಬ್ಬರಿಗೆ ಇರಿತ

ಮುಸ್ಲಿಂ ಯುವತಿ ಜತೆ ಹೋಟೆಲ್‌ಗೆ ಊಟಕ್ಕೆ ಹೋದದ್ದಕ್ಕೆ ಬೆನ್ನಟ್ಟಿ ಯುವಕನ ಮೇಲೆ ಹಲ್ಲೆ

ಇಂದೋರ್‌ : ಮುಸ್ಲಿಂ ಯುವತಿ ಜತೆ ಊಟ ಮಾಡಲು ಹೋಟೆಲ್‌ಗೆ ಹೋಗಿದ್ದ ಹಿಂದು ಯುವಕನ ಮೇಲೆ ಮುಸ್ಲಿಮರ ಗುಂಪೊಂದು ಹಲ್ಲೆ ಮಾಡಿದ್ದು, ಅವರನ್ನು ರಕ್ಷಿಲು ಬಂದ ಇಬ್ಬರನ್ನು ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆದ್ದ ಬಳಿಕ ಮುಸ್ಲಿಮರಿಂದ ಹೊಸ ವರಾತ ಶುರುವಾಗಿದೆ ಎಂದು ಹಲವು ಮಂದಿ ಸೋಷಿಯಲ್‌ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ. ಮುಸ್ಲಿಮರು ಹಿಂದು ಯುವಕನಿಗೆ ಥಳಿಸಿದ ವೀಡಿಯೊ ವೈರಲ್‌ ಆಗಿದೆ. ಗುಂಪಿನಲ್ಲಿ 20ರಷ್ಟು ಮಂದಿ ಇದ್ದರು. ಈ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಯುವಕ ಮತ್ತು ಯುವತಿ ಊಟ ಮಾಡಿ ಹೋಟೆಲಿಂದ ಹೊರ ಬರುತ್ತಿದ್ದಂತೆ ಮುಸ್ಲಿಮರ ಗುಂಪು ಅವರನ್ನು ಬೆನ್ನಟ್ಟಿಕೊಂಡು ಹೋಗಿ ಅಡ್ಡಗಟ್ಟಿ ಹಿಂದು ಯುವಕನ ಜತೆ ಯಾಕೆ ಹೋದದ್ದು ಎಂದು ಯುವತಿಯನ್ನು ಗದರಿಸಿದೆ. ಮನೆಯಲ್ಲೇ ಹೇಳಿಯೇ ಬಂದಿದ್ದೇನೆ ಎಂದು ಯುವತಿ ತಿಳಿಸಿದ ಯುವತಿ ಹಲ್ಲೆ ಮಾಡಲು ಮುಂದಾದ ಗುಂಪಿಗೆ ಪ್ರತಿರೋಧ ತೋರಿಸಿದ್ದಾಳೆ. ಈ ನಡುವೆ ಇಬ್ಬರು ವ್ಯಕ್ತಿಗಳು ಗುಂಪಿನಿಂದ ಇವರಿಬ್ಬರನ್ನು ರಕ್ಷಿಸಲು ಮುಂದೆ ಬಂದಿದ್ದಾರೆ. ಆಗ ಗುಂಪಿನಲ್ಲಿದ್ದವರು ಯುವಕನನ್ನು ಥಳಿಸಿ ರಕ್ಷಿಸಲು ಬಂದವರಿಗೆ ಇರಿದಿದ್ದಾರೆ. ಗುಂಪಿನಲ್ಲಿದ್ದವರೆಲ್ಲ 23-26 ವರ್ಷ ವಯಸ್ಸಿನ ಯುವಕರು. ಇಬ್ಬರನ್ನು ಬಂಧಿಸಿದ್ದು, ಉಳಿದವರನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.







































































error: Content is protected !!
Scroll to Top