ನೂತನ ಮುಖ್ಯಮಂತ್ರಿಗೆ ಹೊಸ ಕಾರು
ಬೆಂಗಳೂರು : ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿ ಪಟ್ಟ ಏರಲಿರುವ ಸಿದ್ದರಾಮಯ್ಯ ಅವರಿಗಾಗಿ ಸರ್ಕಾರ ಹೊಸ ಕಾರು ಖರೀದಿ ಮಾಡಿದೆ. ಟೊಯೋಟಾ ವೆಲ್ಫೈರ್ ಕಾರು ಇದಾಗಿದ್ದು, ಇದರ ಬೆಲೆ ಬರೋಬ್ಬರಿ ಒಂದು ಕೋಟಿ ರೂಪಾಯಿ.
ಇನ್ನು ಮುಂದೆ ಸಿದ್ದರಾಮಯ್ಯ ಅವರು ಇದೇ ಕಾರಿನಲ್ಲಿ ಎಲ್ಲ ಕಡೆ ಓಡಾಡಲಿದ್ದಾರೆ. ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯ ಸರಕಾರಿ ಕಾರು ಬದಲಾಯಿಸಿ ಭಾರಿ ಟೀಕೆಗೆ ಗುರಿಯಾದದ್ದನ್ನು ನೆನಪಿಸಿಕೊಳ್ಳಬಹುದು. ಮೂಢನಂಬಿಕೆಗಳನ್ನು ನಂಬದ ಸಿದ್ದರಾಮಯ್ಯ ಹಳೇ ಕಾರಿನ ಮೇಲೆ ಕಾಗೆ ಕೂತ ಕಾರಣಕ್ಕೆ ಕಾರನ್ನೇ ಬದಲಾಯಿಸಿದ್ದಾರೆ ಎಂದು ಟೀಕಿಸಲಾಗಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಐದು ದಿನಗಳ ಬಳಿಕ ಕೊನೆಗೂ ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ವಿಚಾರ ಬಗೆಹರಿದಿದೆ. ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಡಿ.ಕೆ. ಶಿವಕುಮಾರ್ ಏಕೈಕ ಡಿಸಿಎಂ ಎಂಬುದನ್ನು ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಘೋಷಿಸಿದೆ.































