ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅನ್ನಛತ್ರ ಕಾಮಗಾರಿಗೆ ಚಾಲನೆ

ಕಾರ್ಕಳ : ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನಕ್ಕೆ ಸಂಬಂಧಿಸಿದಂತೆ ಅನ್ನಛತ್ರ ನಿರ್ಮಾಣದ ಕಾಮಗಾರಿಗೆ ಮೇ 12 ರಂದು ಚಾಲನೆ ನೀಡಲಾಯಿತು. ಈಗಾಗಲೇ ಏಕಕಾಲದಲ್ಲಿ 250 ಮಂದಿ ಊಟ ಮಾಡುವ ಛತ್ರಪತಿ ಅನ್ನಛತ್ರ ವ್ಯವಸ್ಥೆ ಸಭಾಭವನದಲ್ಲಿ ಲಭ್ಯವಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಅದಕ್ಕೆ ಪೂರಕವಾಗಿ ಬಫೆ ಊಟಕ್ಕೆ ಅನುಕೂಲವಾಗುವಂತೆ ಜೀಜಾಭಾಯಿ ಭೋಜನ ಶಾಲೆ ಎಂಬ ಹೆಸರಿನಲ್ಲಿ ಅನ್ನಛತ್ರ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಗಿರೀಶ್‌ ರಾವ್‌, ಅರ್ಚಕ ದಿನೇಶ್‌ ಭಟ್‌, ಮೊಕ್ತೇಸರರಾದ ಗಣೇಶ್‌ ರಾವ್‌, ರಾಮಚಂದ್ರ ರಾವ್‌, ಸುಧೀರ್‌ ರಾವ್‌, ದಯಾನಂದ ರಾವ್‌, ಸುರೇಂದ್ರ ರಾವ್‌ ಮತ್ತು ಪ್ರಕಾಶ್‌ ಶೆಟ್ಟಿ ಉಪಸ್ಥಿತರಿದ್ದರು.

































































error: Content is protected !!
Scroll to Top